ಜೆಡಿಎಸ್ ಶಾಸಕರಿಗೆ ಜಿಲ್ಲೆಯ ಬಗ್ಗೆ ಎಳ್ಳಷ್ಟು ಕಾಳಜಿ ಇಲ್ಲ, ಅವರದ್ದು ಬರೀ ರಾಜಕಾರಣದ ತಂತ್ರ.
ಬೇರೆ ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಬಿಟ್ಟರೇ ಇವರ ಸಾಧನೆ ಏನು.?
ದಬ್ಬಾಳಿಕೆ, ಗುಂಡಾಗಿರಿ, ದುರಹಂಕಾರ ಬಿಟ್ಟರೆ ಇವರು ಜನಸಾಮಾನ್ಯರ ಪರ ಮಾತನಾಡಲ್ಲ ಅವರನ್ನು ಜನ ಆಯ್ಕೆ ಮಾಡಿರುವುದು ಕೇವಲ ಸುಮಲತಾ ಟಾರ್ಗೆಟ್ ಮಾಡೋಕಾ.? ಎಂದು ಸಂಸದೆ ಸುಮಲತಾ ಅಂಬರೀಷ್ ಶುಕ್ರವಾರ ವಾಗ್ದಾಳಿ ನಡೆಸಿದರು.
ಮಂಡ್ಯದಲ್ಲಿ ಸಂಸದೆ ಸುದ್ದಿಗಾರರ ಜೊತೆ ಮಾತನಾಡಿ ಮತ್ತೆ ಜೆಡಿಎಸ್ ಶಾಸಕರ ವಿರುದ್ಧ ಸಂಸದೆ ಸುಮಲತಾ ವಾಗ್ದಾಳಿ ಮಾಡಿ, ಅಧಿವೇಶನ ವೇಳೆ ದಿಶಾ ಸಭೆ ನಿಗದಿ ವಿಚಾರ ಪ್ರಸ್ತಾಪಿಸಿ 3 ವರ್ಷಗಳಲ್ಲಿ ನಡೆದ ದಿಶಾ ಸಭೆಗೆ ಎಷ್ಟು ಬಾರಿ ಜೆಡಿಎಸ್ ಶಾಸಕರು ಹಾಜರಾಗಿದ್ದಾರೆ?
2 ವರ್ಷಗಳಲ್ಲಿ ಒಂದೇ ಒಂದು ಸಭೆಗೆ ಜೆಡಿಎಸ್ ಶಾಸಕರು ಬಂದಿಲ್ಲ. ಆದರೆ ಅಕ್ರಮ ಗಣಿಗಾರಿಕೆ ವಿರುದ್ಧ ನಾನು ನಿಂತಾಗ ಎಲ್ಲರೂ ಸಭೆಗೆ ಹಾಜರಾಗಿದ್ದರು ಎಂದು ಹೇಳಿದರು.
ಕೆಲವೊಮ್ಮೆ ಅಧಿವೇಶನ ಸಂಧರ್ಭದಲ್ಲೂ ಸಭೆ ನಡೆಸಬೇಕಾಗುತ್ತದೆ. ಈಗ ಹೆಚ್ಚು ಮಳೆಯಾಗಿ ರಸ್ತೆ, ಮನೆ, ಬೆಳೆ ಹಾನಿಯಾಗಿದೆ. ಹಾಗಾಗಿ ತುರ್ತು ಸಭೆ ನಡೆಸಿ ಜನರಿಗೆ ಪರಿಹಾರ ಕೊಡಿಸುವ ಕೆಲಸ ಮಾಡಬೇಕು.
ಅದು ಬಿಟ್ಟು ರಾಜಕಾರಣ ಮಾಡೋದಕ್ಕೆ ಆಗುತ್ತಾ.? ಎಂದು ಸುಮಲತಾ ಪ್ರಶ್ನೆ ಮಾಡಿದರು. ಬೆಂಗಳೂರಿನಲ್ಲಿ ಕಾಲೇಜ್ ವಿವಾದ: ನಟಿ ಶ್ರೀಲೀಲಾ ತಾಯಿಗೆ ಬಂಧನದ ಭೀತಿ
ನಮಗೂ ಸಂಸತ್ ಅಧಿವೇಶನ ಇದ್ದಾಗ ನೋಟೀಸ್ ನೀಡದೆ ಶಾಸಕರು ಕೆಡಿಪಿ ಸಭೆ ಮಾಡುತ್ತಾರೆ.
ಅಧಿವೇಶನದಲ್ಲಿ ಜಿಲ್ಲೆಯ ಸಮಸ್ಯೆ ಬಗ್ಗೆ ಯಾವ ಶಾಸಕರು ಮಾತನಾಡಿದ್ದಾರೆ. ನಾನು ಸಂಸತ್‌ನಲ್ಲಿ ಸಮಸ್ಯೆಗಳ ಬಗ್ಗೆ ಮಾತನಾಡಿದ್ದೇನೆ, ಶಾಸಕರು ಮಾತನಾಡಿರುವ ಬಗ್ಗೆ ರೆಕಾರ್ಡ್ ತೆಗೆದು ನೋಡಿ ಎಂದು ಸವಾಲು ಹಾಕಿದರು.
- ಮಂಡ್ಯ ದೀಪಾಲಂಕಾರಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ
- 4 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ – ಬಂಧನ
- ಸಮ್ಮೇಳನಾಧ್ಯಕ್ಷ ನಾಡೋಜ ಗೊ.ರು.ಚನ್ನಬಸಪ್ಪರವರಿಗೆ ಅದ್ಧೂರಿ ಸ್ವಾಗತ
- ವಕ್ಫ್ ಆಸ್ತಿ ಸಂಬಂಧ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚನೆ: ಮುಖ್ಯಮಂತ್ರಿ ಸಿದ್ದರಾಮಯ್ಯ
- ರಾಜ್ಯಾದ್ಯಂತ ಡಿ. 31 ರಿಂದ ಸಾರಿಗೆ ನೌಕರರ ಮುಷ್ಕರ
More Stories
ಮಂಡ್ಯ ದೀಪಾಲಂಕಾರಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ
4 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ – ಬಂಧನ
ಸಮ್ಮೇಳನಾಧ್ಯಕ್ಷ ನಾಡೋಜ ಗೊ.ರು.ಚನ್ನಬಸಪ್ಪರವರಿಗೆ ಅದ್ಧೂರಿ ಸ್ವಾಗತ