March 31, 2023

Newsnap Kannada

The World at your finger tips!

shreelila

ಬೆಂಗಳೂರಿನಲ್ಲಿ ಕಾಲೇಜ್ ವಿವಾದ: ನಟಿ ಶ್ರೀಲೀಲಾ ತಾಯಿಗೆ ಬಂಧನದ ಭೀತಿ

Spread the love

ಸುಧೀರ್ ಅಂಗೂರ್ ಮಾಲೀಕತ್ವದ ಬೆಂಗಳೂರಿನ ಪ್ರತಿಷ್ಠಿತ ಅಲಯನ್ಸ್ ಯುನಿವರ್ಸಿಟಿಯನ್ನು ರಾಜಕಾರಣಿಯೊಬ್ಬರಿಗೆ ಮಾರಾಟ ಮಾಡಲು ಡೀಲ್ ಕುದುರಿಸಿದ ಹಾಗೂ ವಿವಿಗೆ ಗೂಂಡಾಗಳನ್ನು ಕರೆದುಕೊಂಡು ಬಂದು ಬೆದರಿಕೆ ಹಾಕಿದ ಆರೋಪದ ಮೇಲೆ ಮಾಜಿ ಕುಲಪತಿ ಮಧುಕರ್ ಅಂಗೂರ್ ಮತ್ತು ಸ್ಯಾಂಡಲ್​ವುಡ್ ನಟಿ ಶ್ರೀಲೀಲಾರ ತಾಯಿ ಸ್ವರ್ಣಲತಾ ವಿರುದ್ಧ ದೂರು ದಾಖಲಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ಗ್ರಾಮಾಂತರ ಎಸ್‌ಪಿ ಮಲ್ಲಿಕಾರ್ಜುನ್‌, ಅಲಯನ್ಸ್‌ ವಿವಿಯಲ್ಲಿ ಮಧುಕರ್‌ ಗಲಾಟೆ ಮಾಡಿದ್ದಾರೆ. ಬಲವಂತವಾಗಿ ವಿವಿಯ ಗೇಟ್‌ ತೆಗೆದು ಒಳನುಗ್ಗಿದ್ದಾರೆ.

5-6 ಜನರ ಜೊತೆ ಹೋಗಿ ಅಲಯನ್ಸ್‌ ವಿವಿ ನಮಗೆ ಸೇರಿದ್ದು ಎಂದು ಮಧುಕರ್‌ ಗಲಾಟೆ ನಡೆಸಿದ್ದಾರೆ ಎಂದು ಆರೋಪಿಸಿ ರಿಜಿಸ್ಟ್ರಾರ್‌ ನಿವೇದಿತಾ ಜೈನ್‌ ಆನೇಕಲ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ವಿವರಿಸಿದರು. ಎಚ್ ಎಸ್ ಮುದ್ದೇಗೌಡರ ಪುತ್ರ- ಕಿರುತೆರೆ ಕಲಾವಿದ ಮಂಡ್ಯ ರವಿ ಪ್ರಸಾದ್ ಇನ್ನಿಲ್ಲ

ವಿಚಾರಣೆ ಬಳಿಕ
ಈ ದೂರಿನಲ್ಲಿ 40-50 ಜನ ಬೌನ್ಸರ್‌ ಇದ್ದರೆಂದು ತಿಳಿಸಿದ್ದಾರೆ. 4 ಶಸ್ತ್ರಾಸ್ತ್ರ ಇದ್ದವೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮಧುಕರ್‌ ಅಂಗೂರ್‌ ಸೇರಿ 15 ಜನರನ್ನು ವಶಕ್ಕೆ ಪಡೆದಿದ್ದೇವೆ. ಕೂಲಂಕುಷವಾಗಿ ವಿಚಾರಣೆ ಬಳಿಕ ಸತ್ಯಾಂಶ ಗೊತ್ತಾಗುತ್ತೆ ಎಂದು ಹೇಳಿದ್ದಾರೆ.

error: Content is protected !!