November 8, 2025

Newsnap Kannada

The World at your finger tips!

rain,damage,Mandya

MP prathap simha visits Mandya rain-damaged area

ಮಂಡ್ಯ ಮಳೆ ಹಾನಿ ಪ್ರದೇಶಕ್ಕೆ ಸಂಸದ ಸಿಂಹ ಭೇಟಿ: ಸುಮಾಲತಾ – ಸಿಂಹ ನಡುವೆ ವಾರ್ ಸಂಭವ

Spread the love

ಮಂಡ್ಯ ಜಿಲ್ಲೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಮಳೆಯಿಂದ ಮುಳುಗಡೆಯಾದ ಪ್ರದೇಶಗಳಿಗೆ ಮೈಸೂರು-ಕೊಡಗು ಸಂಸದ ಪ್ರತಾಪಸಿಂಹ ಭೇಟಿ ನೀಡಿರುವ ಸಂಗತಿ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ

ಈ ಕಾರಣಕ್ಕಾಗಿ ಮೈಸೂರು ಮತ್ತು ಮಂಡ್ಯ ಸಂಸದರ ನಡುವೆ ಟೆರಿಟೋರಿ ವಾರ್ರ್ ಅರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನು ಓದಿ –ಜಲಾಶಯದಲ್ಲಿ ಗ್ರಿಪ್ ಸಿಗದೇ ಜಾರಿ ಬಿದ್ದ ಯುವಕ – ವಿಡಿಯೋ ವೈರಲ್

ಮಂಡ್ಯ ವ್ಯಾಪ್ತಿಯ ಪ್ರದೇಶಕ್ಕೆ ಮೈಸೂರು ಸಂಸದ ಪ್ರತಾಪಸಿಂಹ ಭೇಟಿ ನೀಡಿರುವುದು ಮತ್ತೆ ಮಂಡ್ಯ ಸಂಸದರ ಅಸಮಾಧಾನಕ್ಕೆ ಕಾರಣವಾಗಲಿದೆ.

ಮಳೆಯಿಂದ ಮುಳುಗಡೆಯಾಗಿದ್ದ ಬೀಡಿ ಕಾಲೋನಿಗೆ ಪ್ರತಾಪಸಿಂಹ ಭೇಟಿ ನೀಡಿದರು. ಈ ವೇಳೆ ಮಳೆಯಿಂದ ಹದಗೆಟ್ಟಿರುವ ರಸ್ತೆಯನ್ನು ಸರಿಪಡಿಸಿಕೊಡುವಂತೆ ಸ್ಥಳೀಯರು ಮನವಿ ಮಾಡಿಕೊಂಡಿದ್ದರು. ಇಂಡುವಾಳ ಸಮೀಪ ಕೊಚ್ಚಿಹೋಗಿದ್ದ ಹೆದ್ದಾರಿ ಬಳಿಗೂ ಪ್ರತಾಪಸಿಂಹ ಭೇಟಿ ನೀಡಿ ಪರಿಶೀಲಿಸಿದರು.

ಈ ಹಿಂದೆಯೂ ಪ್ರತಾಪಸಿಂಹಗೆ ನಿಮ್ಮ ಕ್ಷೇತ್ರದ ಕೆಲಸ ಮಾಡಿಕೊಳ್ಳಿ. ನಮ್ಮ ಕ್ಷೇತ್ರದ ಕೆಲಸ ನಾವು ಮಾಡಿಕೊಳ್ಳುತ್ತೇವೆ ಎಂದು ಮಂಡ್ಯ ಸಂಸದೆ ಸುಮಲತಾ ತರಾಟೆಗೆ ತೆಗೆದುಕೊಂಡಿದ್ದರು. ಇದಾದ ಬಳಿಕ ಒಂದು ವಾರಗಳ ಕಾಲ ಮೈಸೂರು ಸಂಸದ ಹಾಗೂ ಮಂಡ್ಯ ಸಂಸದರ ನಡುವೆ ವಾಕ್ ಸಮರ ಏರ್ಪಟ್ಟಿತು. ಇದೀಗ ಮತ್ತೆ ಪ್ರತಾಪಸಿಂಹ ಮಂಡ್ಯದ ವಿಚಾರಗಳಿಗೆ ಎಂಟ್ರಿ ಕೊಟ್ಟಿದ್ದಾರೆ.

ಈ ಎಂಟ್ರಿಯಿಂದ ಮೂಲಕ ಮತ್ತಷ್ಟು ವಾಕ್ ಸಮರ ಏರ್ಪಡುವ ಸಾಧ್ಯತೆ ಇದೆ. ಇತ್ತ ಹೆಚ್ಚು ಮಳೆಹಾನಿಯಾಗಿರುವ ಪ್ರದೇಶಗಳಿಗೆ ಇದುವರೆಗೂ ಸಂಸದೆ ಸುಮಲತಾ ಭೇಟಿ ನೀಡಿಲ್ಲ. ಕೇವಲ ಒಂದು ಊರಿಗೆ ಹೋಗಿ ವಾಪಸ್ ತೆರಳಿದ್ದರು.

error: Content is protected !!