July 7, 2022

Newsnap Kannada

The World at your finger tips!

youth,water,falls

A young man who slips into a reservoir without a grip - Video

ಜಲಾಶಯದಲ್ಲಿ ಗ್ರಿಪ್ ಸಿಗದೇ ಜಾರಿ ಬಿದ್ದ ಯುವಕ – ವಿಡಿಯೋ ವೈರಲ್

Spread the love

ಜಲಾಶಯದ ಗೋಡೆ ಹತ್ತಲು ಮುಂದಾಗಿದ್ದು, ಹಿಡಿದುಕೊಳ್ಳಲು ಯಾವುದೇ ಆಧಾರವಿಲ್ಲದಿದ್ದರೂ ಹುಚ್ಚಾಟ ಮೆರೆದಿದ್ದಾನೆ. ಅರ್ಧದವರೆಗೆ ಡ್ಯಾಂ ಹತ್ತಿದ ವ್ಯಕ್ತಿ ಗ್ರಿಪ್ ಸಿಗದೇ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ.

ಇದನ್ನು ಓದಿ –ಮದುವೆ ಮಂಟಪದಲ್ಲಿ ಮೂರ್ಛೆ ಹೋದ ವರ : ತಲೆಯಿಂದ ಜಾರಿದ ವಿಗ್ – ಮದುವೆಗೆ ನಿರಾಕರಿಸಿದ ವಧು

ಭಾರಿ ಮಳೆಯಿಂದಾಗಿ ಜಲಾಶಯಗಳು ತುಂಬಿ ಹರಿಯುತ್ತಿದ್ದು, ಅಪಾಯದ ಅರಿವಿದ್ದರೂ ವ್ಯಕ್ತಿಯೋರ್ವ ಡ್ಯಾಂ ಮೇಲೆ ಹುಚ್ಚಾಟ ಆಡಲು ಹೋಗಿ ಬಿದ್ದ ಘಟನೆ ಚಿಕ್ಕಬಳ್ಳಾಪುರದ ಶ್ರೀನಿವಾಸಸಾಗರ ಜಲಾಶಯದಲ್ಲಿ ನಡೆದಿದೆ.

ಪ್ರವಾಸಕ್ಕೆಂದು ಬಂದ ವ್ಯಕ್ತಿ ನೂರಾರು ಜನರ ಮುಂದೆ ಸಾಹಾಸ ಪ್ರದರ್ಶಿಸಲು ಹೋಗಿದ್ದಾನೆ.

water falls

ಈ ಭಯಾನಕ ದೃಶ್ಯವನ್ನು ಕೆಲ ಪ್ರವಾಸಿಗರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಡ್ಯಾಂ ನಿಂದ ಬಿದ್ದ ಯುವಕ ಗೌರಿಬಿದನೂರು ಮೂಲದವನಾಗಿದ್ದು, ಗಂಭೀರವಾಗಿ ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

error: Content is protected !!