July 7, 2022

Newsnap Kannada

The World at your finger tips!

vishwanath

MP Pratap Simha is an unworthy - H Viswanath

ಸಂಸದ ಪ್ರತಾಪ್ ಸಿಂಹ ಒಬ್ಬ ಅಯೋಗ್ಯ – ಎಚ್ ವಿಶ್ವನಾಥ್

Spread the love

ಸಂಸದ ಪ್ರತಾಪ್ ಸಿಂಹ ಒಬ್ಬ ಅಯೋಗ್ಯ, ವಕೀಲ ವೃತ್ತಿ ಬಗ್ಗೆ ಅವನಿಗೇನು ಗೊತ್ತು ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಪ್ರಶ್ನೆ ಮಾಡಿದರು

ಇದನ್ನು ಓದಿ –ಜಮೀನು ಬಿಟ್ಟುಕೊಡದಿದ್ದಕ್ಕೆ ಬೆಳೆ ನಾಶ ಮಾಡಿದ ದುಷ್ಕರ್ಮಿಗಳು! ಮಂಡ್ಯದಲ್ಲಿ ರೈತ ಕುಟುಂಬ ಬೀದಿಗೆ

ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ವಿಶ್ವನಾಥ್ ಅವರು, ಸಿದ್ದರಾಮಯ್ಯ ನಾವೆಲ್ಲರೂ ಒಟ್ಟಿಗೆ ಲಾ ಪ್ರಾಕ್ಟೀಸ್ ಮಾಡಿದ್ದೇವೆ. ಅವನಿಗೇನಾಗಿದೆ ಬಾಯಿಗೆ ಬಂದಂಗೆ ಮಾತನಾಡುತ್ತಾನೆ. ಮಹಾರಾಜರನ್ನು ಬಿಟ್ಟರೇ ನಾನೇ ಹೆಚ್ಚು ಕೆಲಸ ಮಾಡಿದ್ದೇನೆ ಅಂತಾನೆ. ಈ ಎಂಪಿ ಕಾಲದಲ್ಲಿ ಏನೂ ಕೆಲಸವಾಗಿಲ್ಲ. 2014ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೆ, ನಾನು ಸೋಲುತ್ತಿರಲಿಲ್ಲ ಎಂದರು

ರಾಜ್ಯದ ಮಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕುತ್ತಿದ್ದೀರಾ, ನಿಮಗೆ ನಾಚಿಕೆ ಆಗುವುದಿಲ್ಲವೆ?
ಕರ್ನಾಟಕದ ಶಾಂತಿಯನ್ನು ಮಸೀದಿಯಲ್ಲಿನ ಶಿವಲಿಂಗ ಹುಡುಕುವ ಮೂಲಕ ಕದಡಲಾಗುತ್ತಿದೆ. ಬಿಜೆಪಿ ವಕ್ತಾರರು ಬಾಯಿಗೆ ಬಂದ ರೀತಿ ಮಾತನಾಡುತ್ತಿದ್ದಾರೆ. ನಾಯಕರು ಇದಕ್ಕೆ ಕಡಿವಾಣ ಹಾಕಬೇಕು ಎಂದರು

ಆರ್‌ಎಸ್‌ಎಸ್‌ ನಾಯಕರು ಪತ್ರಿಕಾಗೋಷ್ಠಿಯಲ್ಲಿ ಹೇಳಬೇಕು. ಮಸೀದಿಗಳಲ್ಲಿ ಶಿವಲಿಂಗ ಹುಡುಕುವುದನ್ನು ನಿಲ್ಲಿಸಿ ಅಂತಾ ಹೇಳಬೇಕು ಹರಿಹಾಯ್ದಿದ್ದಾರೆ.

error: Content is protected !!