ಕಳೆದ ಮೂರು ದಿನಗಳ ಹಿಂದೆ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಂಯುಕ್ತಾ (3) ಎಂಬ ಮಗುವನ್ನು ತಾಯಿ ಗಾಯತ್ರಿ, ನೀರಿನ ಟಬ್ನಲ್ಲಿ ಮುಳಗಿಸಿ ಸಾಯಿಸಿರುವ ಅರೋಪ ಕೇಳಿಬಂದಿದೆ.ಇದನ್ನು ಓದಿ –ಜೈಪುರ ಕ್ಯಾಸಿನೊ ಪ್ರಕರಣ : ರಾಜ್ಯದ ಅಧಿಕಾರಿಗಳೂ ಸೇರಿ 84 ಮಂದಿ ಬಂಧನ- ಕೋಲಾರ CPI ಆಂಜಪ್ಪ ಅಮಾನತು
ಮಗುವನ್ನು ಕೊಂದ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಪ್ರಜ್ಞೆ ಇಲ್ಲದೆ ಗಾಯತ್ರಿಯನ್ನು ಪತಿ ನರೇಂದ್ರ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸದ್ಯ ಗಾಯತ್ರಿ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಷ್ಟಗಳನ್ನು ಎದುರಿಸಲು ಆಗುತ್ತಿಲ್ಲ ಎಂದು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನರೇಂದ್ರ ಹಾಗೂ ಗಾಯತ್ರಿ ದಂಪತಿ ತಮಿಳುನಾಡು ಮೂಲದವರು. ಇಪ್ಪತ್ತು ದಿನಗಳ ಹಿಂದಷ್ಟೇ ನರೇಂದ್ರ ಅವರ ತಾಯಿ ತಮಿಳುನಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು