ಜೈಪುರ ಕ್ಯಾಸಿನೊ ಪ್ರಕರಣ : ರಾಜ್ಯದ ಅಧಿಕಾರಿಗಳೂ ಸೇರಿ 84 ಮಂದಿ ಬಂಧನ- ಕೋಲಾರ CPI ಆಂಜಪ್ಪ ಅಮಾನತು

Team Newsnap
1 Min Read
Jaipur Casino Case: 84 arrested including state officials- Kolar CPI Anjappa suspended ಜೈಪುರ ಕ್ಯಾಸಿನೊ ಪ್ರಕರಣ : ರಾಜ್ಯದ ಅಧಿಕಾರಿಗಳೂ ಸೇರಿ 84 ಮಂದಿ ಬಂಧನ- ಕೋಲಾರ CPI ಆಂಜಪ್ಪ ಅಮಾನತು

ಜೈಪುರದ ಜೈಸಿಂಗ್‌ಪುರ ಖೋರ್ ಪ್ರದೇಶದ ರೆಸಾರ್ಟ್ ಮೇಲೆ ಪೊಲೀಸರು ದಾಳಿ ನಡೆಸಿದ ಬಳಿಕ ಅಕ್ರಮ ಜೂಜಾಟದಲ್ಲಿ ತೊಡಗಿದ್ದ 13 ಮಹಿಳೆಯರು ಸೇರಿದಂತೆ 84 ಮಂದಿಯನ್ನು ಬಂಧಿಸಲಾಗಿದೆ.

ಕೋಲಾರದ CPI ಆಂಜಪ್ಪ, ಬೆಂಗಳೂರು ಗ್ರಾಮಾಂತರ ಸಬ್ ರಿಜಿಸ್ಟರ್ ಶ್ರೀನಾಥ್, ತೆರಹಳ್ಳಿ ಸರ್ಕಾರಿ ಶಾಲೆ ಶಿಕ್ಷಕ ಕೆ.ಎನ್.ರಮೇಶ್, ಬಿಜೆಪಿ ಮುಖಂಡ ರಾಜೇಶ್ ಹಾಗೂ ವ್ಯಾಪಾರಿ ಸುಧಾಕರ್ ಸೇರಿ ಕರ್ನಾಟಕದ 7 ಮಂದಿಯನ್ನು ಬಂಧಿಸಲಾಗಿದೆ.ಇದನ್ನು ಓದಿ –ಪ್ರಿಯತಮೆ ಅಕೌಂಟಿಗೆ ಲಕ್ಷ, ಲಕ್ಷ ರು ವರ್ಗಾವಣೆ ಮಾಡಿದ ಬಿಬಿಎಂಪಿ ಅಧಿಕಾರಿ

ಜೈಪುರ ಪೊಲೀಸರ ತಂಡ ಶನಿವಾರ ರಾತ್ರಿ ಆರೋಪಿಗಳು ಜೂಜಾಡುತ್ತಿದ್ದ ಸಾಯಿಪುರ ಬಾಗ್ ರೆಸಾರ್ಟ್ ಮೇಲೆ ದಾಳಿ ನಡೆಸಿದ ನಂತರ ಅವರನ್ನು ಬಂಧಿಸಲಾಗಿದೆ. 9 ಹುಕ್ಕಾ, ಐಎಂಎಫ್‌ಎಲ್‌ನ 44 ಬಾಟಲಿಗಳು, 66 ಬಿಯರ್ ಬಾಟಲಿಗಳು, 14 ಐಷಾರಾಮಿ ಕಾರುಗಳು, ಒಂದು ಟ್ರಕ್ ಮತ್ತು 23.78 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಜೈಪುರ ಪೊಲೀಸ್ ಹೆಚ್ಚುವರಿ ಆಯುಕ್ತ ಅಜಯ್‌ಪಾಲ್ ಲಂಬಾ ತಿಳಿಸಿದ್ದರು

ಕೋಲಾರ ಇನ್ಸ್ ಪೆಕ್ಟರ್ ಅಮಾನತ್ತು :

ಜೈಸಿಂಗ್‌ಪುರ ಖೋರ್ ಪ್ರದೇಶದಲ್ಲಿ ನಡೆದ ಜೂಟಾಟ ಪ್ರಕರಣದಲ್ಲಿ ಕೋಲಾರ ಬಂಧನಕ್ಕೊಳಗಾಗಿದ್ದ ಸರ್ಕಲ್ ಸಬ್ ಇನ್ಸ್ ಪೆಕ್ಟರ್ ಆಂಜಪ್ಪನನ್ನು ಅಮಾನತು ಮಾಡಲಾಗಿದೆ.

ಆಂಜಪ್ಪನನ್ನು ಅಮಾನತು ಮಾಡಿರುವುದಾಗಿ ಕೇಂದ್ರ ವಲಯದ ಐಜಿಪಿ ಚಂದ್ರಶೇಖರ್ ಆದೇಶಿಸಿದ್ದಾರೆ ಎಂದು ಕೋಲಾರದ ಎಸ್‌ಪಿ ಡಿ.ದೇವರಾಜ್ ಮಾಹಿತಿ ನೀಡಿದ್ದಾರೆ.

Share This Article
Leave a comment