ಬೆಂಗಳೂರಿನ ಬಿಬಿಎಂಪಿ ಅಧಿಕಾರಿ ಮತ್ತು ಪ್ರಿಯತಮೆಯಿಂದ ಸರ್ಕಾರಿ ಹಣದಲ್ಲಿ ಅಂದ ದರ್ಬಾರ್ ತೋರಿದ ಘಟನೆ ಜರುಗಿದೆ.
ಬಿಬಿಎಂಪಿ ಬ್ಯಾಟರಾಯನಪುರ ಕಚೇರಿ ಎಸ್ ಡಿಎ ಪ್ರಕಾಶ್ ಎಂಬಾತ ತನ್ನ ಪ್ರಿಯತಮೆ ಅಕೌಂಟಿಗೆ ಲಕ್ಷ ಲಕ್ಷ ಹಣ ವರ್ಗಾವಣೆ ಮಾಡಿರುವುದು ಬಯಲಾಗಿದೆ.ಇದನ್ನು ಓದಿ –ಸೆಪ್ಟಂಬರ್ 2 ರಂದು ಮಂಗಳೂರಿಗೆ ಪ್ರಧಾನಿ ಭೇಟಿ
ಸುಮಾರು 14.70 ಲಕ್ಷ ರು ಹಣ ಪ್ರಕಾಶ್ ಹಾಗೂ ಪ್ರೇಯಸಿ ಕಾಂಚನಾ ಅಕೌಂಟ್‍ಗೆ ವರ್ಗಾವಣೆ ಮಾಡಲಾಗಿದೆ. ಈ ಬಗ್ಗೆ ಇಇ ರಾಜೇಂದ್ರ ನಾಯಕ್ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೊಲೀಸರು ಎಸ್ ಡಿಎ ಪ್ರಕಾಶ್ ಮತ್ತು ಆತನ ಪ್ರೇಯಸಿ ಕಾಂಚನಾ ಬಂಧಿಸಿದ್ದಾರೆ. ಪೊಲೀಸರ ತನಿಖೆ ವೇಳೆ ಆರೋಪಿ ಕಾಂಚನಾ ಚಿನ್ನ ಖರೀದಿ ಹಾಗೂ ಬ್ಯೂಟಿ ಪಾರ್ಲರ್ ಇಟ್ಟುಕೊಂಡಿರುವುದಾಗಿ ತಿಳಿದುಬಂದಿದೆ.
ಬಿಬಿಎಂಪಿಯು 2021 -22 ರ ಅವಧಿಯ ಆಡಿಟ್ ನಡೆಸುವ ವೇಳೆ ಬ್ಯಾಟರಾಯನಪುರ ಕಚೇರಿಯ ಆಡಿಟ್ ಪುಸ್ತಕ ಒದಗಿಸಲು ಇಇ ರಾಜೇಂದ್ರ ನಾಯಕ್ ಅವರು ಪ್ರಕಾಶ್ ಗೆ ಸೂಚಿಸಿದರು.
ಆದರೆ ಪ್ರಕಾಶ್, ಆಡಿಟ್ ಪುಸ್ತಕ ಒದಗಿಸದೆ ರಜೆ ಮೇಲೆ ತೆರಳಿದ್ದ. ಈ ವೇಳೆ ಬಿಬಿಎಂಪಿ ಅಧಿಕಾರಿಗಳು ಖುದ್ದು ತಾವೇ ಪರಿಶೀಲನೆ ನಡೆಸಿದರು. ಕೆನರಾ ಬ್ಯಾಂಕ್ ಅಕೌಂಟ್ ಪರಿಶೀಲನೆ ವೇಳೆ ಹಣ ದುರುಪಯೋಗ ಬೆಳಕಿಗೆ ಬಂದಿದೆ.
- ಗಾಂಧೀ ಜೀ……
- ಚಿಕ್ಕ ಮಂಡ್ಯ ಬಳಿ ಜಮೀನಿಗೆ ನುಗ್ಗಿದ ಕಾಡಾನೆ ದಂಡು – ಜನರಿಗೆ ಆತಂಕ
- ಸಾಲಕ್ಕೆ ಹೆದರಿ ತುಮಕೂರಿನ ಬಳಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ : ತಂದೆ-ತಾಯಿ, ಮಗಳ ದುರಂತ ಸಾವು
- ಶಿವಮೊಗ್ಗದಲ್ಲಿ ಕೋಮು ಗಲಭೆ : ಈದ್ ಮೆರವಣಿಗೆ ವೇಳೆ ಕಲ್ಲು ತೂರಾಟ ಹಲವರಿಗೆ ಗಾಯ : 35 ಜನ ಪೊಲೀಸ್ ವಶಕ್ಕೆ
- ಜೀವ ರಕ್ಷಕ CPR -ಪಠ್ಯಕ್ಕೆ ಸೇರಿಸಲು ಚಿಂತನೆ
- ನಟ ನಾಗಭೂಷಣ ಕಾರು ಬೆಂಗಳೂರಿನಲ್ಲಿ ಅಪಘಾತ- ಮಹಿಳೆ ಸಾವು