February 19, 2026

Newsnap Kannada

The World at your finger tips!

modi mother

ನಾಲ್ಕು ರಾಜ್ಯಗಳಲ್ಲಿ ಗೆದ್ದ ನಂತರ ತಾಯಿ ಆಶೀರ್ವಾದ : ಜೊತೆಯಲ್ಲೇ ಊಟ ಮಾಡಿದ ಮೋದಿ

Spread the love

ಪಂಚರಾಜ್ಯಗಳ ಚುನಾವಣೆಯಲ್ಲಿ 4 ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಇದಾದ ನಂತರ ಪ್ರಧಾನಿ ಮೋದಿ ತಾಯಿಯನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದಾರೆ.

ಮೋದಿ 2 ದಿನದ ಗುಜರಾತ್ ಪ್ರವಾಸದಲ್ಲಿದ್ದಾರೆ. ಈ ವೇಳೆ ಗಾಂಧಿನಗರದಲ್ಲಿರುವ ತಮ್ಮ ತಾಯಿಯನ್ನು ಭೇಟಿಯಾಗಿ, ತಾಯಿ ಆಶೀರ್ವಾದವನ್ನು ಪಡೆದು ಜೊತೆಯಲ್ಲಿ ಕುಳಿತು ರಾತ್ರಿಯ ಭೋಜನ ಸವಿದರು.

modhi mother2

ಅಹಮದಾಬಾದ್‍ನಲ್ಲಿ ರೋಡ್‍ಶೋ ಮುಗಿಸಿ ಗುಜರಾತ್ ಪಂಚಾಯತ್ ಮಹಾಸಮ್ಮೇಳನದಲ್ಲಿ ಭಾಷಣ ಮಾಡಿದ ನಂತರ ಗಾಂಧಿನಗರಕ್ಕೆ ಬಂದು ತಮ್ಮ ತಾಯಿ ಹೀರಾ ಬೆನ್ ಅವರನ್ನು ಭೇಟಿಯಾಗಿದ್ದಾರೆ. ಮೋದಿಗೆ ಅವರ ತಾಯಿ ಹೀರಾಬೆನ್ ಶುಭಾಶಯ ಕೋರಿ ಆಶೀರ್ವಾದ ಮಾಡಿದರು.

ಮೋದಿ ಮತ್ತು ಅವರ ತಾಯಿ ಇಬ್ಬರೂ ಡೈನಿಂಗ್ ಟೇಬಲ್‍ನಲ್ಲಿ ಕುಳಿತು ಒಟ್ಟಿಗೆ ರಾತ್ರಿಯ ಊಟವನ್ನು ಮಾಡಿದ್ದಾರೆ.

error: Content is protected !!