ಮನೆಯಲ್ಲಿ ನಾಯಿ ಸಾಕುವ ವಿಚಾರ – ಅತ್ತೆ , ಮಾವನ ಜೊತೆ ಜಗಳ: ತಾಯಿ, ಮಗಳು ಆತ್ಮಹತ್ಯೆ

Team Newsnap
1 Min Read
34 DySPs transferred in the state ರಾಜ್ಯದಲ್ಲಿ 34 ಮಂದಿ ಡಿವೈಎಸ್ಪಿ ವರ್ಗಾವಣೆ

ಮನೆಯಲ್ಲಿ ನಾಯಿ ಸಾಕುವ ವಿಚಾರಕ್ಕೆ ನಡೆದಿದ್ದ ಜಗಳ ತಾಯಿ, ಮಗಳ ಆತ್ಮಹತ್ಯೆಯಲ್ಲಿ ಅಂತ್ಯವಾಗಿದೆ, ಬೆಂಗಳೂರಿನಲ್ಲಿ ನಡೆದ ಈ ಘಟನೆಯಲ್ಲಿ ದಿವ್ಯಾ ಹಾಗೂ ಆಕೆಯ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಯಿ ವಿಚಾರಕ್ಕೆ ಅತ್ತೆ-ಮಾವನ ಜೊತೆ ದಿವ್ಯಾಳಿಗೆ ಜಗಳವಾಗಿದೆ. ಈ ಜಗಳವು ದಿವ್ಯಾ ನೇಣಿಗೆ ಕಾರಣವಾಗಿದೆ.

ಈ ಘಟನೆ ನಡೆದು ಮೂರು ದಿನಗಳ ನಂತರ ತಡವಾಗಿ ಬೆಳಕಿಗೆ ಬಂದಿದೆ. ದಿವ್ಯಾ ಮನೆಯಲ್ಲಿ ನಾಯಿ ಸಾಕುತ್ತಿದ್ದರು. ಇತ್ತ ಉಸಿರಾಟ ಸಂಬಂಧದ ಕಾಯಿಲೆಯಿಂದ ದಿವ್ಯಾ ಬಳಲುತ್ತಿದ್ದರು. ಹೀಗಾಗಿ ವೈದ್ಯರು ಮನೆಯಲ್ಲಿ ನಾಯಿ ಇದ್ದರೆ ಕಾಯಿಲೆ ವಾಸಿಯಾಗಲ್ಲ ಎಂದಿದ್ದರು. ಹೀಗಾಗಿ ನಾಯಿಯನ್ನು ಯಾರಿಗಾದರೂ ನೀಡಿ ಎಂದು ಅತ್ತೆ-ಮಾವನಿಗೆ ದಿವ್ಯಾ ಹೇಳಿದ್ದರು. ನಾನು ಭ್ರಷ್ಟಾಚಾರಿ ಅಲ್ಲ: ಮೇಲುಕೋಟೆ ದೇವರ ಎದುರು ಆಣೆ ಮಾಡಲು ಸಿದ್ದ – ಸಂಸದೆ ಸುಮಲತಾ ಸವಾಲು

ಆದರೆ ನಾಯಿಯನ್ನು ಮನೆಯಿಂದ ಕಳಿಸಲು ಅತ್ತೆ-ಮಾವ ಒಪ್ಪಲಿಲ್ಲ. ಇದೇ ವಿಚಾರಕ್ಕೆ ದಿವ್ಯಾ ಹಾಗೂ ಅತ್ತೆ-ಮಾವನ ನಡುವೆ ಭಾರಿ ಗಲಾಟೆ ಆಗಿದೆ. ಇದರಿಂದ ಮನನೊಂದ ದಿವ್ಯಾ ತನ್ನ ಮಗಳ ಜೊತೆ ಆತ್ಮಹತ್ಯೆಗೆ ಶರಣಾಗಿದ್ದಾರೆ.ಗೋವಿಂದ ಪುರ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share This Article
Leave a comment