SSLC ಪರೀಕ್ಷೆಯನ್ನು ಒಟ್ಟಿಗೆ ಬರೆದ ತಾಯಿ – ಮಗಳು – ಉತ್ತೀರ್ಣ

Team Newsnap
1 Min Read

SSLC ಪರೀಕ್ಷೆಯನ್ನು ಒಟ್ಟಿಗೆ ಬರೆದ ತಾಯಿ – ಮಗಳು ಉತ್ತೀರ್ಣರಾಗಿದ್ದಾರೆ.

ವಿಜಯನಗರದ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ನಿವಾಸಿ, ಚಿಲುಗೋಡಿ ಹೈಸ್ಕೂಲ್‌ ಶಿಕ್ಷಕ ಬಿ.ರಾಮಜ್ಜರ ಪತ್ನಿ ಸವಿತಾ (37) ಹಾಗೂ ಮಗಳು ಚೇತನಾ ಇಬ್ಬರೂ ಈ ವರ್ಷ SSLC ಪರೀಕ್ಷೆ ಬರೆದು ತೇರ್ಗಡೆಯಾದ ತಾಯಿ – ಮಗಳು.

ಇದನ್ನು ಓದಿ – ಕಾರು ಸರಣಿ ಅಪಘಾತ – ಓರ್ವ ಸಾವು : ಕಿರುತೆರೆ ಸಹ ನಿರ್ದೇಶಕ ಬಂಧನ

ಸವಿತಾ 2002-03ರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯಾಗಿದ್ದರು. ವೈವಾಹಿಕ ಕಾರಣದಿಂದ ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸಲಾಗದ ಅವರು ತಮ್ಮ ಮಗಳೊಂದಿಗೆ ತಾವೂ ಸಹ ಪರೀಕ್ಷೆ ಬರೆಯಬೇಕು ಎಂಬ ಹಂಬಲಕ್ಕೆ ಬಿದ್ದಿದ್ದರು. ಇದಕ್ಕೆ ಪತಿ ಹಾಗೂ ಮಗಳು ಸಹ ಸಾಥ್​ ನೀಡಿದ್ದರು.

ಇದನ್ನು ಓದಿ – ಮಂಡ್ಯದಲ್ಲಿ ಬಿಜೆಪಿ ಮ್ಯಾಜಿಕ್! ಆಗುತ್ತೆ – ಒಂದು ವಾರ ಕಾಯಿರಿ : ಗೋ ಮಧುಸೂಧನ್

ಪಟ್ಟಣದ ಸ.ಪ.ಪೂ.ಕಾಲೇಜಿನಲ್ಲಿ ಖಾಸಗಿ ವಿದ್ಯಾರ್ಥಿಯಾಗಿ ಪರೀಕ್ಷೆ ತೆಗೆದುಕೊಂಡು ಅಭ್ಯಾಸ ನಡೆಸಿದ್ದಾರೆ. ಹೊಸಪೇಟೆಯ ಚೈತನ್ಯ ಟೆಕ್ನೊ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದು ಶೇ. 45ರಷ್ಟುಅಂಕ ಪಡೆದು ಪಾಸಾಗಿದ್ದಾರೆ. ಅವರ ಮಗಳು ಚೇತನಾ ಸ್ಮಯೋರ್‌ ವ್ಯಾಸಪುರಿ ಪ್ರೌಢಶಾಲೆಯ ಕೇಂದ್ರದಲ್ಲಿ ಪರೀಕ್ಷೆ ಬರೆದು ಶೇ.85 ಅಂಕ ಪಡೆದು ತೇರ್ಗಡೆಯಾಗಿದ್ದಾರೆ.

Share This Article
Leave a comment