ಸ್ವಗತ

Team Newsnap
0 Min Read
nalini prasad
ಸೋ. ನಳಿನಾ ಪ್ರಸಾದ್
ಮುಂಬಯಿ

“ಹೀಗ್ಯಾಕೆ ಸುಮ್ಮನಿದ್ದುಬಿಟ್ಟಿದ್ದೀಯ?
ಮಾತಾಡು,

ಸದ್ದುಬರುವಂತೆ ಪಾದ ಒತ್ತಿ ನಡೆದಾಡು,

ನೀರು ಗುಟುಕರಿಸುವಾಗ ಬೇಕಂತಲೇ ಗಂಟಲು ಕೊಂಕಿಸು,

ಉಸಿರಾಟ ನೆನಪಾದಾಗೆಲ್ಲ ಸ್ವಲ್ಪ ಜೋರಾಗಿ ಉಸಿರೆಳೆದುಕೊ,

ಆಗಾಗ ಕನ್ನಡಿ ನೋಡಿಕೊಂಡು ಮುಖವಿದೆಯಾ ಅಂತ ಖಾತ್ರಿಮಾಡಿಕೊ……….

ನಗುವು ನಿನ್ನದು, ನಡಿಗೆ ನಿನ್ನದು;
ಆಕಳಿಕೆ, ಬಿಕ್ಕಳಿಕೆಗಳೂ ನಿನ್ನವು.

ಇಲ್ಲಿ ಹಠವಿದೆ, ತ್ಯಾಗವಿದೆ,
ಧ್ಯಾನವಿದೆ, ಪರಿಪೂರ್ಣ ಅರ್ಪಣೆಯಿದೆ.

ನೀ ದೇವಿಯಲ್ಲ;
ಬರಿ ಶಕ್ತಿಯಲ್ಲ..
ಮಾನವತೆಯ ಪರಿಪಾಕ.

ನಿನ್ನ ಆತ್ಮ ಸ್ಥೈರ್ಯ ಸಾಂಕ್ರಾಮಿಕವಾಗಬೇಕು
ಮಿಥ್ಯವನ್ನು ಭಗ್ನಗೊಳಿಸಲು;
ಸತ್ಯವನ್ನು ನಗ್ನಗೊಳಿಸಲು..

ಮೂಕಳಾದರೆ ಲೋಕವೂ ನೂಕಿಬಿಟ್ಟೀತು……….. ಶಬ್ದವಾಗು “

Share This Article
Leave a comment