ನ. 11 ರಂದು ರಾಜ್ಯದ ಮೊದಲ ವಂದೇ ಮಾತರಂ ರೈಲಿಗೆ ಮೋದಿ ಚಾಲನೆ : ಎಕ್ಸ್ ಪ್ರೆಸ್ ರೈಲಿನ ಡಿಟೇಲ್ಸ್ ಇಲ್ಲಿದೆ

Team Newsnap
2 Min Read
Vande Bharat train service to start between Dharwad and Bangalore by July - Joshi ಜುಲೈ ವೇಳೆಗೆ ಧಾರವಾಡ - ಬೆಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭ - ಜೋಶಿ

ರಾಜ್ಯದ ಮೊದಲ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ನ. 11 ರಂದು ದೇಶದ ಐದನೇ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.

ಮೈಸೂರಿನಿಂದ ಚೆನ್ನೈಗೆ, ಚೆನ್ನೈ ಟು ಮೈಸೂರು ಸಂಚಾರ ಮಾಡಲಿದೆ. 16 ಬೋಗಿಗಳನ್ನು ಒಳಗೊಂಡಿರುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ಇದಾಗಿದೆ. ಮೈಸೂರು-ಚೆನ್ನೈ ನಡುವಿನ ಸಂಚಾರ ದರ ಎಕಾನಮಿ ಕ್ಲಾಸ್ ದರ 921 ರೂ. ಆಗಿದೆ.ಮಂಡ್ಯದಲ್ಲಿ ಮಾನವೀಯತೆ ಮರೆತ ಪೊಲೀಸರು : ಆಸ್ಪತ್ರೆಗೆ ಹೋಗುವವರನ್ನು ತಡೆದು, ಹೆಲ್ಮೆಟ್ ನೆಪದಲ್ಲಿ ದೌರ್ಜನ್ಯ

ಉಭಯ ನಗರಗಳ ನಡುವಿನ ಪ್ರಯಾಣ ಸಮಯ 6 ಗಂಟೆ 40 ನಿಮಿಷ ಬೇಕಾಗುತ್ತೆ. ಮೈಸೂರು ಟು ಬೆಂಗಳೂರಿನ ನಡುವಿನ ಪ್ರಯಾಣ 2 ಗಂಟೆ ಆಗುತ್ತೆ. ವಂದೇ ಭಾರತ್ ರೈಲಿನ ವೇಗ 170 ಕಿಮೀ ಇದೆಯಾದರೂ, ಉಭಯ ನಗರಗಳ ಮಧ್ಯ 75 ಕಿಮೀ ವೇಗದಲ್ಲಿ ರೈಲು ಸಂಚರಿಸಲಿದೆ.

ಟಿಕೆಟ್‌ ದರ ಎಷ್ಟು?

ಮೈಸೂರಿನಿಂದ ಚೆನ್ನೈ ಗೆ ಎಕನಾಮಿ ಕ್ಲಾಸ್ ದರ 921 ರೂ., ಎಕ್ಸಿಕ್ಯುಟಿವ್ ದರ 1,880 ರೂ. ಇರಲಿದೆ. ಇನ್ನೂ ಮೈಸೂರಿನಿಂದ ಬೆಂಗಳೂರಿಗೆ ಎಕಾನಮಿ ಕ್ಲಾಸ್ ದರ 368 ರೂ. ಹಾಗೂ ಎಕ್ಸಿಕ್ಯುಟಿವ್ 768 ರೂ. ನಿಗದಿಪಡಿಸಲಾಗಿದೆ. ಶತಾಬ್ದಿಗೆ ಹೋಲಿಸಿದರೆ ಟಿಕೆಟ್ ದರ ಶೇ.39 ರಷ್ಟು ಹೆಚ್ಚು ಇರಲಿದೆ.

ಎಷ್ಟು ದಿನ ಸಂಚಾರ?

20607 ನಂಬರಿನ ವಂದೇ ಭಾರತ್ ಎಕ್ಸ್‌ಪ್ರೆಸ್ ವಾರದಲ್ಲಿ 6 ದಿನ ಸಂಚಾರ ಮಾಡಲಿದೆ. ಬುಧವಾರ ಹೊರತುಪಡಿಸಿ ವಾರದ ಎಲ್ಲಾ ದಿನ ಸಂಚರಿಸಲಿದೆ. ಪ್ರತಿ ದಿನ ಚೆನ್ನೈ ಸೆಂಟ್ರಲ್‌ನಿಂದ ಬೆಳಗ್ಗೆ 5.50 ಕ್ಕೆ ಹೊರಟು ಬೆಂಗಳೂರು ಸಿಟಿ ಜಂಕ್ಷನ್‌ಗೆ 10:25ಕ್ಕೆ ಸೇರಲಿದೆ. 5 ನಿಮಿಷಗಳ ಕಾಲ ನಿಲ್ದಾಣದಲ್ಲಿ ನಿಲ್ಲಲ್ಲಿದ್ದು, 10:30 ಕ್ಕೆ ಹೊರಟು 12:30 ಕ್ಕೆ ಮೈಸೂರು ತಲುಪಲಿದೆ. ಬಳಿಕ ವಾಪಸ್ ಮೈಸೂರಿನಿಂದ 1:05 ಕ್ಕೆ ಹೊರಡಲಿದ್ದು, ಬೆಂಗಳೂರಿಗೆ ಮಧ್ಯಾಹ್ನ 2:55 ಕ್ಕೆ ಸೇರಲಿದೆ. ಬೆಂಗಳೂರಿನಿಂದ 3 ಗಂಟೆಗೆ ಹೊರಟು ಚೆನ್ನೈಗೆ 7:35 ಕ್ಕೆ ತಲುಪಲಿದೆ. 20607 ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು ಜಂಕ್ಷನ್ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಬೆಂಗಳೂರು ಸಿಟಿ ಜಂಕ್ಷನ್‌ನಲ್ಲಿ ಕೇವಲ 1 ಕಡೆ ನಿಲುಗಡೆಯನ್ನು ಹೊಂದಿರುತ್ತದೆ.

Share This Article
Leave a comment