December 23, 2024

Newsnap Kannada

The World at your finger tips!

modi prachara

7 ದಿನಗಳ ‘ಚುನಾವಣಾ ಪ್ರಚಾರ’ ಅಂತ್ಯಗೊಳಿಸಿದ ಪ್ರಧಾನಿ ಮೋದಿ

Spread the love

ಕರ್ನಾಟಕ ವಿಧಾನಸಭಾ ಚುನಾವಣೆಗೆ ನಾಳೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಇಂದು ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿನಲ್ಲಿ ರೋಡ್ ಶೋ, ದಕ್ಷಿಣ ಕನ್ನಡ, ಮೈಸೂರಿನಲ್ಲಿ ಪ್ರಚಾರ ಸಭೆಯನ್ನು ನಡೆಸಿದರು.

ಹುಮ್ನಾಬಾದ್ ನಲ್ಲಿ ಆರಂಭಗೊಂಡ ಅವರ ಚುನಾವಣಾ ಪ್ರಚಾರವು, ಇಂದು ನಂಜನಗೂಡಿನ ನಂಜುಂಡೇಶ್ವರ ಸನ್ನಿಧಿಯಲ್ಲಿ ಅಂತ್ಯಗೊಂಡಿದೆ.

ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರು ಏಪ್ರಿಲ್ 29ರಂದು ಬೀದರ್ ಜಿಲ್ಲೆಯ ಹುಮ್ನಾಬಾದ್ ನಲ್ಲಿ ಬಿಜೆಪಿ ಅಭ್ಯರ್ಥಿಯ ಪರವಾಗಿ ಚುನಾವಣಾ ಪ್ರಚಾರ ಆರಂಭಿಸಿದರು. ಮೇ.7ರ ಇಂದಿನವರೆಗೆ ಒಟ್ಟು 7 ದಿನಗಳ ಕಾಲ ಅವರು ರಾಜ್ಯದಲ್ಲಿ ಮತಬೇಟೆಯನ್ನು ನಡೆಸಿದರು.

ಕರ್ನಾಟಕದಲ್ಲಿ ಮೋದಿಯವರು 18 ಸಾರ್ವಜನಿಕ ಸಭೆ, 6 ರೋಡೋ ಶೋಗಳನ್ನು ನಡೆಸಿದರು. ಅದರಲ್ಲೂ ಬೆಂಗಳೂರಿನಲ್ಲಿ ಅತ್ಯಂತ ಹೆಚ್ಚು ರೋಡ್ ಶೋ ನಡೆಸಿ, ಸಿಲಿಕಾನ್ ಸಿಟಿಯಲ್ಲಿ ಮತಪ್ರಚಾರವನ್ನು ಕೈಗೊಂಡದರು.

ಇಂದು ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಮೋದಿಯವರು ಕೊನೆಯ ಚುನಾವಣಾ ಪ್ರಚಾರ ಸಭೆಯನ್ನು ನಡೆಸಿದರು. ಈ ಬಳಿಕ ನಂಜುಂಡೇಶ್ವರ ದೇಗುಲಕ್ಕೆ ತೆರಳಿ ಪ್ರದಕ್ಷಿಣೆ ಹಾಕಿ, ವಿಶೇಷ ಪೂಜೆಯನ್ನು ಸಲ್ಲಿಸಿದರು.

ಮೋದಿಯವರು ಬೆಂಗಳೂರು, ಮೈಸೂರು ಕಲಬುರ್ಗಿಯಲ್ಲಿ ರೋಡ್ ಶೋ ನಡೆಸಿದ್ರೇ, ಹುಮ್ನಾಬಾದ್, ವಿಜಯಪುರ, ಕುಟಚಿ, ಕೋಲಾರ, ಚನ್ನಪಟ್ಟಣ, ಬೇಲೂರು, ಚಿತ್ರದುರ್ಗ, ಹೊಸಪೇಟೆ, ಸಿಂಧನೂರು, ಮುಲ್ಕಿ, ಅಂಕೋಲಾ, ಬೈಲಹೊಂಗಲ, ಬಳ್ಳಾರಿ, ತುಮಕೂರು, ಬಾದಾಮಿ, ಹಾವೇರಿ, ಶಿವಮೊಗ್ಗ ಹಾಗೂ ಇಂದು ನಂಜನಗೂಡಿನಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ನಡೆಸಿದರು.

Copyright © All rights reserved Newsnap | Newsever by AF themes.
error: Content is protected !!