ಕರ್ನಾಟಕ ವಿಧಾನಸಭಾ ಚುನಾವಣೆಗೆ ನಾಳೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಇಂದು ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿನಲ್ಲಿ ರೋಡ್ ಶೋ, ದಕ್ಷಿಣ ಕನ್ನಡ, ಮೈಸೂರಿನಲ್ಲಿ ಪ್ರಚಾರ ಸಭೆಯನ್ನು ನಡೆಸಿದರು.
ಹುಮ್ನಾಬಾದ್ ನಲ್ಲಿ ಆರಂಭಗೊಂಡ ಅವರ ಚುನಾವಣಾ ಪ್ರಚಾರವು, ಇಂದು ನಂಜನಗೂಡಿನ ನಂಜುಂಡೇಶ್ವರ ಸನ್ನಿಧಿಯಲ್ಲಿ ಅಂತ್ಯಗೊಂಡಿದೆ.
ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರು ಏಪ್ರಿಲ್ 29ರಂದು ಬೀದರ್ ಜಿಲ್ಲೆಯ ಹುಮ್ನಾಬಾದ್ ನಲ್ಲಿ ಬಿಜೆಪಿ ಅಭ್ಯರ್ಥಿಯ ಪರವಾಗಿ ಚುನಾವಣಾ ಪ್ರಚಾರ ಆರಂಭಿಸಿದರು. ಮೇ.7ರ ಇಂದಿನವರೆಗೆ ಒಟ್ಟು 7 ದಿನಗಳ ಕಾಲ ಅವರು ರಾಜ್ಯದಲ್ಲಿ ಮತಬೇಟೆಯನ್ನು ನಡೆಸಿದರು.
ಕರ್ನಾಟಕದಲ್ಲಿ ಮೋದಿಯವರು 18 ಸಾರ್ವಜನಿಕ ಸಭೆ, 6 ರೋಡೋ ಶೋಗಳನ್ನು ನಡೆಸಿದರು. ಅದರಲ್ಲೂ ಬೆಂಗಳೂರಿನಲ್ಲಿ ಅತ್ಯಂತ ಹೆಚ್ಚು ರೋಡ್ ಶೋ ನಡೆಸಿ, ಸಿಲಿಕಾನ್ ಸಿಟಿಯಲ್ಲಿ ಮತಪ್ರಚಾರವನ್ನು ಕೈಗೊಂಡದರು.
ಇಂದು ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಮೋದಿಯವರು ಕೊನೆಯ ಚುನಾವಣಾ ಪ್ರಚಾರ ಸಭೆಯನ್ನು ನಡೆಸಿದರು. ಈ ಬಳಿಕ ನಂಜುಂಡೇಶ್ವರ ದೇಗುಲಕ್ಕೆ ತೆರಳಿ ಪ್ರದಕ್ಷಿಣೆ ಹಾಕಿ, ವಿಶೇಷ ಪೂಜೆಯನ್ನು ಸಲ್ಲಿಸಿದರು.
ಮೋದಿಯವರು ಬೆಂಗಳೂರು, ಮೈಸೂರು ಕಲಬುರ್ಗಿಯಲ್ಲಿ ರೋಡ್ ಶೋ ನಡೆಸಿದ್ರೇ, ಹುಮ್ನಾಬಾದ್, ವಿಜಯಪುರ, ಕುಟಚಿ, ಕೋಲಾರ, ಚನ್ನಪಟ್ಟಣ, ಬೇಲೂರು, ಚಿತ್ರದುರ್ಗ, ಹೊಸಪೇಟೆ, ಸಿಂಧನೂರು, ಮುಲ್ಕಿ, ಅಂಕೋಲಾ, ಬೈಲಹೊಂಗಲ, ಬಳ್ಳಾರಿ, ತುಮಕೂರು, ಬಾದಾಮಿ, ಹಾವೇರಿ, ಶಿವಮೊಗ್ಗ ಹಾಗೂ ಇಂದು ನಂಜನಗೂಡಿನಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ನಡೆಸಿದರು.
- ಇಂಡಿಯನ್ ಆಯಿಲ್ ಲಿಮಿಟೆಡ್ನಲ್ಲಿ 456 ಅಪ್ರೆಂಟಿಸ್ ಹುದ್ದೆಗಳ ಭರ್ತಿ – ಅರ್ಜಿ ಆಹ್ವಾನ
- ಇಂದಿನಿಂದಲೇ ಬಿಯರ್ ದರ ಹೆಚ್ಚಳ – ಹೊಸ ಬೆಲೆ ವಿವರ !
- ಮೈಸೂರಿನಲ್ಲಿ ಹೊಸ ಹೋಟೆಲ್ ಆರಂಭಿಸಲು ತಾಜ್ ಗ್ರೂಪ್ ಸಿದ್ಧ
- ಬೆಂಗಳೂರು ಹೊರತಾಗಿ ಇತರ ಭಾಗಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ: ಡಿ.ಕೆ. ಶಿವಕುಮಾರ್
- ಮೈಸೂರು: ಅವಹೇಳನಕಾರಿ ಪೋಸ್ಟ್ ಹಿನ್ನಲೆಯಲ್ಲಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ – 14 ಪೊಲೀಸರಿಗೆ ಗಾಯ
More Stories
ಮೈಸೂರಿನಲ್ಲಿ ಹೊಸ ಹೋಟೆಲ್ ಆರಂಭಿಸಲು ತಾಜ್ ಗ್ರೂಪ್ ಸಿದ್ಧ
ಬೆಂಗಳೂರು ಹೊರತಾಗಿ ಇತರ ಭಾಗಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ: ಡಿ.ಕೆ. ಶಿವಕುಮಾರ್
ಮೈಸೂರು: ಅವಹೇಳನಕಾರಿ ಪೋಸ್ಟ್ ಹಿನ್ನಲೆಯಲ್ಲಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ – 14 ಪೊಲೀಸರಿಗೆ ಗಾಯ