SSLC ಪರೀಕ್ಷೆಯಲ್ಲಿ ಬಾಲಕಿಯರೇ ಮೇಲುಗೈ: ಚಿತ್ರದುರ್ಗ ಪ್ರಥಮ- ಮಂಡ್ಯ ದ್ವಿತೀಯ

Team Newsnap
1 Min Read
SSLC results will be at 12:30

2023 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಪ್ರಕಟಿಸಿದೆ.

ಈ ಬಾರಿ ಶೇ 83.89 ಫಲಿತಾಂಶ ಬಂದಿದೆ. ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಮತ್ತು ಸರ್ಕಾರಿ ಶಾಲಾ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ.

2023ರ ಮಾರ್ಚ್ 31 ರಿಂದ ಏಪ್ರಿಲ್ 15ರವರೆಗೆ ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಒಟ್ಟು ರಾಜ್ಯದ 15,498 ಪ್ರೌಢಶಾಲೆಗಳ 8.42 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದರು. ಇವರಲ್ಲಿ 7,00,619 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಸರ್ಕಾರಿ ಶಾಲೆ ಫಲಿತಾಂಶ – 86.74%, ಅನುದಾನ ಶಾಲೆ- 85.64%, ಖಾಸಗಿ – 90.89% ಫಲಿತಾಂಶ ಸಾಧಿಸಿದೆ. ನಾಲ್ವರು ಜನ ವಿದ್ಯಾರ್ಥಿಗಳು 625 ಅಂಕಗಳಿಸಿದ್ದಾರೆ.

ಬಾಲಕರು – 3,41,108( 80.08%) ಹಾಗೂ ಬಾಲಕಿಯರು – 3,59,511( 87.98%) ಪಾಸ್ ಆಗಿದ್ದಾರೆ. ಈ ಬಾರಿ ಮೊದಲ ಸ್ಥಾನವನ್ನು ಚಿತ್ರದುರ್ಗ (96.80%) ಹಾಗೂ ದ್ವಿತೀಯ ಸ್ಥಾನವನ್ನು ಮಂಡ್ಯ (96.74%), ತೃತೀಯ ಸ್ಥಾನವನ್ನು ಹಾಸನ (96.68%) ಜಿಲ್ಲೆ ಪಡೆದುಕೊಂಡಿದೆ. ಇನ್ನೂ ಕೊನೆ ಸ್ಥಾ‌ನದಲ್ಲಿ ಯಾದಗಿರಿ (75.49%) ಜಿಲ್ಲೆ ಇದೆ

ಫೋಟೋ ‌ಕಾಪಿ ಪಡೆಯಲು ಮೇ 14 ಕೊನೆ ದಿನ. ಮರು ಮೌಲ್ಯಮಾಪನ, ಮರು ಎಣಿಕೆಗೆ ಮೇ 21 ಕೊನೆ ದಿನವಾಗಿದೆ. ಇನ್ನೂ ಪೂರಕ ಪರೀಕ್ಷೆಗೆ ನೋಂದಣಿಗೆ ಮೇ 15 ಕೊನೆ ದಿನವಾಗಿದೆ. ಕರ್ನಾಟಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‍ಸೈಟ್‍ Karresults.nic.in ನಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ವೀಕ್ಷಿಸಬಹುದು.

Share This Article
Leave a comment