ತಿಹಾರ್ ಜೈಲಿನಲ್ಲಿ ಅಧಿಕಾರಿಗಳ ಕಣ್ತಪ್ಪಿಸಲು ಮೊಬೈಲ್ ನುಂಗಿದ ಕೈದಿ

Team Newsnap
1 Min Read

ಅಧಿಕಾರಿಗಳ ಕಣ್ಣುತಪ್ಪಿಸಲು ಕೈದಿಯೊಬ್ಬ ಮೊಬೈಲ್ ನುಂಗಿರುವ ಘಟನೆ ದೆಹಲಿಯ ತಿಹಾರ್ ಜೈಲಿನಲ್ಲಿ ನಡೆದಿದೆ.

ಕೈದಿ ಅಕ್ರಮವಾಗಿ ಮೊಬೈಲ್ ಬಳಕೆ ಮಾಡುತ್ತಿದ್ದನು. ಜನವರಿ 5ರಂದು ಜೈಲು ನಂಬರ್ 1ಕ್ಕೆ ಪೊಲೀಸ್‌ ಅಧಿಕಾರಿಗಳು ಮೊಬೈಲ್ ಪರಿಶೀಲನೆಗೆ ಬಂದಾಗ ಹೆದರಿ ಬೇರೆ ದಾರಿ ಕಾಣದೆ ಮೊಬೈಲ್ ನುಂಗಿದ್ದಾನೆ.

ಡೈರೆಕ್ಟರ್ ಜನರಲ್ ಸಂದೀಪ್ ಗೋಯೆಲ್, ಈ ಕುರಿತಂತೆ ವಿವರಣೆ ನೀಡಿ ಆತನನನ್ನು ದೀನ್ ದಯಾಳ್ ಉಪಾಧ್ಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ ಆರೋಗ್ಯವಾಗಿದ್ದಾನೆ, ಆದರೆ ಮೊಬೈಲ್ ಫೋನ್ ಇನ್ನು ಹೊಟ್ಟೆಯಲ್ಲಿಯೇ ಇದೆ ಎಂದಿದ್ದಾರೆ.

ತಿಹಾರ್ ಜೈಲಿನಲ್ಲಿ ಶೀಘ್ರದಲ್ಲೇ ಎರಡು ಎಕ್ಸ್-ರೇ ಆಧಾರಿತ ಮಾನವ ದೇಹ ಸ್ಕ್ಯಾನರ್‌ಗಳನ್ನುಅಳವಡಿಸಲು ನಿರ್ಧರಿಸಲಾಗಿದೆ.

ಆಗ ಜೈಲು ಆವರಣದೊಳಗೆ ಅಕ್ರಮ ವಸ್ತುಗಳು ಮತ್ತು ಗ್ಯಾಜೆಟ್‌ಗಳು ಒಳನುಸುಳುವಿಕೆಯನ್ನು ತಡೆಯಲು ಈ ಕ್ರಮವನ್ನು ವಹಿಸಲಾಗಿದೆ. ಮೊಬೈಲ್ ಬಳಕೆಯನ್ನು ತಡೆಯಲು ಹೊಸ ತಂತ್ರಜ್ಞಾನ ಮತ್ತು ಸಿಗ್ನಲ್ ನಿರ್ಬಂಧಿಸುವ ಟವರ್‌ಗಳನ್ನು ಹಾಕಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article
Leave a comment