ಮಂಡ್ಯ – ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಿಸಿದ MLC ಮಧು ಮಾದೇಗೌಡ

Team Newsnap
1 Min Read

ಮಂಡ್ಯ: ವಿಕಲಚೇತನರಿಗೆ ನೀಡಿರುವ ಯಂತ್ರಚಾಲಿತ ತ್ರಿಚಕ್ರ ವಾಹನಗಳನ್ನು ಸದುಪಯೋಗ ಪಡೆದುಕೊಳ್ಳುವ ಮೂಲಕ ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಬೇಕು ಎಂದು ವಿಧಾನಪರಿಷತ್ತಿನ ಸದಸ್ಯ ಮಧು ಜಿ.ಮಾದೇಗೌಡ ಸಲಹೆ ನೀಡಿದರು.

ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿ 2022-23ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಯೋಜನೆಯಡಿ ಒಟ್ಟು 08 ಮಂದಿ ವಿಕಲಚೇತನರಿಗೆ ಒಟ್ಟು ರೂ. 7,95,576 ವೆಚ್ಚದಲ್ಲಿ ಯಂತ್ರಚಾಲಿತ ದ್ವಿಚಕ್ರವಾಹನ ವಿತರಿಸಿ ಮಧು ಮಾದೇಗೌಡರು ಮಾತನಾಡಿದರು.

ವಿಕಲಚೇತನರು ಮುಖ್ಯವಾಹಿನಿಗೆ ಬರಲು ಸರ್ಕಾರ ವಿವಿಧ ಯೋಜನೆ ರೂಪಿಸಿ ಪ್ರತ್ಯೇಕ ಅನುದಾನ ಮೀಸಲಿಡುತ್ತಿದೆ. ವಾಹನ ಪಡೆದುಕೊಂಡಿರುವ ವಿಕಲಚೇತನರು ಇನ್ನೊಬ್ಬರಿಗೆ ನೀಡದೇ ಸದ್ಭಳಕೆ ಮಾಡಿಕೊಳ್ಳಬೇಕು. ವಿಕಲಚೇತನರು ನ್ಯೂನತೆಯ ಬಗ್ಗೆ ಮಾನಸಿಕವಾಗಿ ಕುಗ್ಗದೇ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು ಎಂದು ವಿಶ್ವಾಸ ತುಂಬಿದರು.ಮೈಸೂರಿನಲ್ಲಿ ಆ. 26ರಂದು ಗುರುಗಳ ಅಭಿವಂದನೆ ಕಾರ್ಯಕ್ರಮ

ಜಿಲ್ಲಾಧಿಕಾರಿ ಡಾ.ಕುಮಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಾಜಮೂರ್ತಿ, ಹಿರಿಯ ನಾಗರಿಕ ಮತ್ತು ವಿಶೇಷ ಚೇತನ ಕಲ್ಯಾಣಾಧಿಕಾರಿ ರೋಹಿತ್ ಇದ್ದರು.

Share This Article
Leave a comment