ಮೈಸೂರಿನಲ್ಲಿ ಆ. 26ರಂದು ಗುರುಗಳ ಅಭಿವಂದನೆ ಕಾರ್ಯಕ್ರಮ

Team Newsnap
1 Min Read

ಮೈಸೂರು: ನಗರದ ಶ್ರೀ ಗುರು ಪುಟ್ಟರಾಜ ಸಂಗೀತ ಸಭಾದ ಶಾಲೆಯ ಸ್ಥಾಪಕ, ತಬಲಾ ವಾದಕ ಭೀಮಾಶಂಕರ ಬಿದನೂರ ಅವರಿಗೆ ಅವರ ಶಿಷ್ಯ ರೋಹಿತ್ ಕಳಲೆ ಅವರಿಂದ ಗುರು ಅಭಿವಂದನೆ ಕಾರ್ಯಕ್ರಮ ಆಗಸ್ಟ್ 26ರಂದು ಸಂಜೆ 5.30 ಗಂಟೆಗೆ ಮೈಸೂರಿನ ರಾಮಕೃಷ್ಣನಗರದ ರಮಾಗೋವಿಂದ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಶ್ರೀ ಗುರು ಪುಟ್ಟರಾಜ ಸಂಗೀತ ಸಭಾ ವಿದ್ಯಾರ್ಥಿಗಳಿಂದ ತಬಲಾ ವಾದನ, ಪಂ.ರವಿಶಂಕರ್ ಮಿಶ್ರಾ ಅವರಿಂದ ಕೊಳಲು ವಾದನ, ಭೀಮಾಶಂಕರ ಬಿದನೂರ ಹಾಗೂ ಕು.ರೋಹಿತ್ ಕಳಲೆ ಅವರಿಂದ ತಬಲಾ ಜುಗಲ್ ಬಂದಿ ಕಛೇರಿ ನಡೆಯಲಿದೆ.

ನಂತರ ಪಂ.ವೀರಭದ್ರಯ್ಯ ಹಿರೇಮಠ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.

ಮೃತ್ಯುಂಜಯ ಹಿರೇಮಠ ಹಾಗೂ ವಿಘ್ನೇಶ್ ಭಾಗ್ವತ್ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.

ಇದನ್ನು ಓದಿ –ಕಾವೇರಿ ವಿವಾದ: ನೀರು ಹಂಚಿಕೆಗೆ ಸಂಕಷ್ಟ ಸೂತ್ರ-ಸುಪ್ರಿಂ ನಲ್ಲಿ ಸಮರಕ್ಕೆ ‘ರಾಜ್ಯ’ ಸಿದ್ದ

ಈ ಕಾರ್ಯಕ್ರಮಕ್ಕೆ ಸಹೃದಯರು ಆಗಮಿಸಿ ಪ್ರೋತ್ಸಾಹಿಸುವಂತೆ ರೋಹಿತ್ ಹೆತ್ತವರಾದ ಆಶಾ ಹಾಗೂ ಭಾಸ್ಕರ್ ಕಳಲೆ ಕೋರಿದ್ದಾರೆ.

Share This Article
Leave a comment