ಧಾರವಾಡದಲ್ಲಿ ವಕೀಲೆ ಜೊತೆ ಅಸಭ್ಯ ವರ್ತನೆ: ಸಿಪಿಐ ವಿರುದ್ದ FIR ದಾಖಲು

Team Newsnap
1 Min Read

ವಕೀಲೆಯೊಬ್ಬರು ಠಾಣೆಗೆ ಬಂದಾಗ ಅವರ ಜೊತೆಗೆ ಸಿಪಿಐ ಒಬ್ಬರು ಅನುಚಿತ ವರ್ತನೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಧಾರವಾಡದಲ್ಲಿ ಸಿಪಿಐ ಮೇಲೆ ಪ್ರಕರಣ ದಾಖಲಾಗಿದೆ.‌

ಧಾರವಾಡ ಗ್ರಾಮೀಣ ಸಿಪಿಐ ಮಂಜುನಾಥ ಕುಸಗಲ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮಹಿಳಾ ವಕೀಲೆ‌ಯೊಬ್ಬರು ಪ್ರಕರಣಕ್ಕೆ ಸಂಬಂಧಿಸಿ ಧಾರವಾಡ ಗ್ರಾಮೀಣ ಠಾಣೆಗೆ ಹೋಗಿದ್ದರು. ಕನ್ನಡದ ಡಿಂಡಿಮ – ರಾಜ್ಯೋತ್ಸವದ ಸಂಭ್ರಮ

ಆದರೆ ಈ ವೇಳೆ ವಕೀಲೆಗೆ ಕಣ್ಣು ಹೊಡೆದು, ತನ್ನ ತುಟಿಗೆ ತನ್ನದೇ ಕೈಗೆ ಮುತ್ತು ಕೊಟ್ಟು ವಕೀಲೆಗೆ ಅದನ್ನು ಫ್ಲೈಯಿಂಗ್ ಕಿಸ್ ಮಾಡಿದ್ದರು.‌ ಈ ವೇಳೆ ವಕೀಲೆ ಈ‌ ಬಗ್ಗೆ ಪ್ರಶ್ನೆ ಮಾಡಿದ್ದರೂ ಅದಕ್ಕೆ ಇದು ಮಾಡಿದ್ದು ಏನು ತಪ್ಪು ಎಂದು ಸಿಪಿಐ ಕುಸುಗಲ್ ಪ್ರಶ್ನೆ ಮಾಡಿ ಅನುಚಿತವಾಗಿ ವರ್ತಿಸಿದ್ದ. ರಾಜ್ಯದಲ್ಲಿ 11 ಮಂದಿ IPS ಅಧಿಕಾರಿಗಳ ವರ್ಗಾವಣೆ : ಶೋಭಾರಾಣಿ ಬಿಎಂಟಿಎಫ್, ಸಜಿತ್ ಲೋಕಾಯುಕ್ತ ಎಸ್ಪಿ

ಈ ಸಂಬಂಧ ವಕೀಲೆ ದೂರು ಕೊಡಲು ಠಾಣೆಗೆ ಹೋದಾಗ ದೂರು ಪಡೆಯುವುದಕ್ಕೂ ಪೊಲೀಸರು ಹಿಂದೇಟು ಹಾಕಿದ್ದರು. ಪೊಲೀಸರ ವರ್ತನೆ ಖಂಡಿಸಿ ಪ್ರತಿಭಟಿಸಿದ್ದ ಧಾರವಾಡ ವಕೀಲರು, ಎಸ್ಪಿ ಲೋಕೇಶ್ ಜಗಲಾಸರ್ ಅವರಿಗೆ ಮನವಿ ಕೊಟ್ಟು ಕ್ರಮ‌ ಕೈಗೊಳ್ಳಲು ಹೇಳಿದ್ದರು. ಇಲ್ಲದೇ ಹೋದಲ್ಲಿ ಉಗ್ರ ಪ್ರತಿಭಟನೆ ಮಾಡೋ ಎಚ್ಚರಿಕೆ ನೀಡಿದ್ದ ವಕೀಲರು 3 ಗಂಟೆ ಧಾರವಾಡ ಜುಬ್ಲಿ ವೃತ್ತದಲ್ಲಿ ರಸ್ತೆ ತಡೆ ಮಾಡಿದ್ದರು. ಈ ಹಿನ್ನೆಲೆ ಧಾರವಾಡ ಉಪನಗರ ಠಾಣೆಯ ಪೊಲೀಸರು ಈಗ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

Share This Article
Leave a comment