September 23, 2021

Newsnap Kannada

The World at your finger tips!

ಅತೃಪ್ತರಿಗೂ ಸಚಿವ ಸ್ಥಾನ: ಶ್ರೀರಾಮುಲು

Spread the love

ಸೂಕ್ತ ಸಂದರ್ಭದಲ್ಲಿ ಅಸಮಾಧಾನಗೊಂಡಿರುವ ಶಾಸಕರಿಗೂ ಸಚಿವ ಸ್ಥಾನ ಸಿಗಲಿದೆ ಎಂಬ ವಿಶ್ವಾಸ ತಮಗೆ ಇರುವುದಾಗಿ‌‌ ಸಾರಿಗೆ ಸಚಿವ ಶ್ರೀರಾಮುಲು ಹೇಳಿದರು.

ಚಿತ್ರದುರ್ಗದಲ್ಲಿ ನಡೆದ 75 ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿದ ನಂತರ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಅದು ದೊರೆಯದಿದ್ದಾಗ ಅಸಮಾಧಾನ ಆಗುವುದು ಸಹಜ. ನಮ್ಮ ನಾಯಕರು ಅಂತಹ ಶಾಸಕರನ್ನು ಸಮಾಧಾನಗೊಳಿಸುವ ಕಾರ್ಯ ಮಾಡುವರು ಎಂದರು.

ತಮಗೆ ದೊರೆತ ಖಾತೆ ಬಗ್ಗೆ ತೃಪ್ತಿ ಇದೆ. ಜನಸೇವೆ ತಮ್ಮ ಧ್ಯೇಯ. ಕಾಯ, ವಾಚ ಮನಸ್ಸಿನಿಂದ ಕೆಲಸ ಮಾಡುತ್ತೇನೆ. ಈ ಕುರಿತು ಗೊಂದಲ ಬೇಡ ಎಂದು ಶ್ರೀರಾಮುಲು ತಿಳಿಸಿದರು.

ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ನಂತರ ಬಸವರಾಜ ಬೊಮ್ಮಾಯಿ ಅವರು ಜನರಲ್ಲಿ ವಿಶ್ವಾಸ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ೨೦೨೩ರಲ್ಲಿ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.

error: Content is protected !!