ಭಾರತ್ ಗೌರವ್ ರೈಲು ಬೋಗಿ ಪರಿಶೀಲಿಸಿದ ಸಚಿವೆ ಶಶಿಕಲಾ – ರೋಹಿಣಿ ಸಿಂಧೂರಿ

Team Newsnap
2 Min Read
Minister Sasikala - Rohini Sindhuri inspected the Bharat Gaurav train carriage ಭಾರತ್ ಗೌರವ್ ರೈಲು ಬೋಗಿ ಪರಿಶೀಲಿಸಿದ ಸಚಿವೆ ಶಶಿಕಲಾ - ರೋಹಿಣಿ ಸಿಂಧೂರಿ #Thenewsnap #Latestnews #Indian_Railway #india #Rohini_Sindhuri #DC #Banglore #Namma_Mysuru #Mandyanews

ಶ್ರಾವಣ ಮಾಸದ ಕೊನೆಯ ವಾರದಲ್ಲಿ ಕರ್ನಾಟಕದಿಂದ ಕಾಶಿಗೆ ಭಾರತ್ ಗೌರವ್ ರೈಲು ಸಂಚಾರ ನಡೆಸಲಿದೆ ಎಂದು ಕರ್ನಾಟಕದ ಮುಜರಾಯಿ ಮತ್ತು ವಕ್ಫ್ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಭಾರತ್ ಗೌರವ್ ರೈಲು ಬೋಗಿ ಪರಿಶೀಲಿಸಿದ ಸಚಿವೆ ಶಶಿಕಲಾ ಹಾಗೂ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ, ನೈಋತ್ಯ ರೈಲ್ವೆ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಇದನ್ನು ಓದಿ –8 ಜನ IAS ಅಧಿಕಾರಿಗಳ ವರ್ಗಾವಣೆ : ಆರ್ ಲತಾ
ಬೆಂ ಗ್ರಾಮಾಂತರ ಡಿಸಿ

ಬೆಂಗಳೂರಿನ ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ಭಾರತ್ ಗೌರವ್ ಯೋಜನೆಯಡಿ ಸಂಚಾರ ನಡೆಸುವ ರೈಲು ನಿಲ್ಲಿಸಲಾಗಿದೆ. ಸಚಿವರು ರೈಲು ಬೋಗಿಗಳ ವೀಕ್ಷಣೆ ಮಾಡಿ, ರೈಲ್ವೆ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.

ಭಾರತ್ ಗೌರವ್ ರೈಲು ಧಾರ್ಮಿಕ ಕ್ಷೇತ್ರಗಳಿಗೆ ಸಂಚಾರ ನಡೆಸಲಿದೆ. ಬೆಂಗಳೂರಿನಿಂದ ವಾರಣಾಸಿ, ಅಯೋಧ್ಯಾ, ಪ್ರಯಾಗ್‌ ರಾಜ್ ಮತ್ತು ಕಾಶಿಗೆ ಯಾತ್ರಾರ್ಥಿಗಳು ಈ ರೈಲುಗಳ ಮೂಲಕ ಸಂಚಾರ ನಡೆಸಲಿದೆ.

ಈ ವೇಳೆ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ ಜೀವನದಲ್ಲಿ ಒಮ್ಮೆಯಾದರೂ ಕಾಶಿಯಾತ್ರೆಯನ್ನು ಕೈಗೊಳ್ಳಬೇಕು ಎನ್ನುವುದು ಬಹುಪಾಲು ಹಿಂದೂಗಳ ಆಸೆಯಾಗಿರುತ್ತದೆ. ಇದನ್ನು ಪೂರೈಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂಬುದು ನನ್ನ ಆಶಯವಾಗಿತ್ತು. ಇದಕ್ಕೆ ಬೆಂಬಲ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲಾ ರೀತಿಯ ಸಹಕಾರ ನೀಡಿದರು ಎಂದರು.ExCMಕುಮಾರಸ್ವಾಮಿಗೆ ಕೊರೋನಾ ಸೋಂಕು: 10 ದಿನ ವಿಶ್ರಾಂತಿ – ನನ್ನನ್ನು ನೋಡಲು ಬರಬೇಡಿ

“ಶ್ರಾವಣ ಮಾಸದ ಕೊನೆಯಲ್ಲಿ ಭಾರತ್‌ ಗೌರವ್ ರೈಲು ಸಂಚಾರ ಆರಂಭಿಸಲಿದೆ. ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ರೈಲು ಸಂಚಾರ ನಡೆಸಲಿದೆ. ಕಾಶಿ ಯಾತ್ರಾರ್ಥಿಗಳು ಸಂಚಾರ ನಡೆಸುವ ರೈಲುಗಳ ವಿನ್ಯಾಸ ಸಿದ್ಧಪಡಿಸಲು ಅನುಮತಿ ದೊರಕಿದೆ” ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಕಡಿಮೆ ಖರ್ಚಿನಲ್ಲೇ ಪ್ರವಾಸ :

ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿಗೆ ಕಡಿಮೆ ಖರ್ಚಿನಲ್ಲಿ ಸಂಚಾರ ನಡೆಸಲು ಅನುಕೂಲವಾಗುವಂತೆ ಪ್ಯಾಕೇಜ್‌ಗಳನ್ನು ರೂಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಮುಜರಾಯಿ ಇಲಾಖೆ ಇಟ್ಟಿದೆ. ಇಲಾಖೆಯಿಂದ ರೈಲುಗಳನ್ನು ಬಾಡಿಗೆಗೆ ಪಡೆದು ಕಾಶಿಗೆ ಓಡಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ” ಎಂದು ಸಚಿವರು ಮಾಹಿತಿ ನೀಡಿದರು.

7 ದಿನಗಳ ಪ್ಯಾಕೇಜ್ :

ಧಾರ್ಮಿಕ ಕ್ಷೇತ್ರಗಳಿಗೆ ಸಂಚಾರ ನಡೆಸುವ ರೈಲಿನ ವಿನ್ಯಾಸ ಬದಲಿಸುವ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ. ಪ್ರವಾಸಿ ಪ್ಯಾಕೇಜ್ 7 ದಿನಗಳನ್ನು ಒಳಗೊಂಡಿರುತ್ತದೆ. ರೈಲುಗಳನ್ನು ಬಾಡಿಗೆ ಪಡೆಯಲು 1 ಕೋಟಿ ರೂ. ಭೌತಿಕ ಗ್ಯಾರಂಟಿಯನ್ನು ಇಲಾಖೆಗೆ ನೀಡಲಾಗಿದೆ ಎಂದು ಸಚಿವರು ಹೇಳಿದರು.

Share This Article
Leave a comment