ಗ್ಯಾರಂಟಿ ಸಂಬಂಧಿಸಿದ ಖಾತೆ ವಹಿಸಿಕೊಳ್ಳಲು ಸಚಿವರ ಹಿಂದೇಟು.?

Team Newsnap
1 Min Read

ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿ ಈಗ ಸಂಕಷ್ಟಕ್ಕೆ ಸಿಲುಕಿಸಿದೆ, ಖಾತೆ ಹಂಚಿಕೆಯಲ್ಲಿ ಸಚಿವರು ಗ್ಯಾರಂಟಿ ಸಂಬಂಧಿಸಿದ ಖಾತೆ ವಹಿಸಿಕೊಳ್ಳಲು ಸಚಿವರು ಹಿಂದೇಟು ಹಾಕುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ, ಉಚಿತ ಬಸ್ ಪ್ರಯಾಣ, ಅನ್ನಭಾಗ್ಯ ಗ್ಯಾರಂಟಿ ಯೋಜನೆಗಳ ಜಾರಿಗೆ ಜೂನ್ 1 ರಂದು ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಸಮಿತಿ ರಚಿಸಲಾಗುವುದು. ಯೋಜನೆಗಳ ಬ್ಲೂಪ್ರಿಂಟ್ ತಯಾರಿಸಲು ಸಿದ್ಧತೆ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ. ಹೊಸ ರುಚಿ: ಮಾವಿನ ಹಣ್ಣಿನ ಕಲಾಕಂದ್

ಗ್ಯಾರಂಟಿಗಳ ಜಾರಿಗೆ ರಾಜ್ಯ ಸರ್ಕಾರಕ್ಕೆ ಸಂಕಷ್ಟ ಎದುರಾಗಿದ್ದು, ವಿಶೇಷ ಸಮಿತಿ ರಚನೆಗೆ ಸಿಎಂ ಚಿಂತನೆ ನಡೆಸಿದ್ದಾರೆ. ಗ್ಯಾರಂಟಿ ಘೋಷಣೆಯಿಂದ ಸರ್ಕಾರಕ್ಕೆ ದೊಡ್ಡ ಮಟ್ಟದ ಆರ್ಥಿಕ ಹೊರೆ ಆಗಲಿದೆ. ಇಲಾಖೆಗಳಿಗೂ ಹೊಡೆತ ಬೀಳಲಿದೆ. ಹೀಗಾಗಿ ಸಂಬಂಧಪಟ್ಟ ಖಾತೆಯನ್ನು ವಹಿಸಿಕೊಳ್ಳಲು ನೂತನ ಸಚಿವರು ಹಿಂದೇಟು ಹಾಕುತ್ತಿದ್ದಾರೆನ್ನಲಾಗಿದೆ. ಅಭಿ ಮದುವೆ ಬೆಂಗಳೂರಿನಲ್ಲಿ; ಬೀಗರ ಊಟ – ಮಂಡ್ಯ

ಈ ಕಾರಣಗಳಿಂದ ಹೀಗಾಗಿ ಸಂಪುಟ ಸಭೆಯ ಆರ್ಥಿಕ ತಜ್ಞರು, ಹಿರಿಯ ಸಚಿವರನ್ನೊಳಗೊಂಡ ವಿಶೇಷ ಸಮಿತಿ ರಚನೆ ಮಾಡುವ ಸಾಧ್ಯತೆ ಇದೆ. ಸಮಿತಿಯ ಅಭಿಪ್ರಾಯದಂತೆ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು. ನಂತರ ಗ್ಯಾರಂಟಿ ಯೋಜನೆಗಳ ಅನುಷ್ಠಾನಗೊಳಿಸಲಾಗುವುದು. ಗ್ಯಾರಂಟಿ ಯೋಜನೆಗಳ ದುರುಪಯೋಗವಾಗದಂತೆ ನಿಗಾ ವಹಿಸಲು ಚರ್ಚೆ ನಡೆದಿದೆ ಎನ್ನಲಾಗಿದೆ.

Share This Article
Leave a comment