ಹೊಸ ರುಚಿ: ಮಾವಿನ ಹಣ್ಣಿನ ಕಲಾಕಂದ್

Team Newsnap
1 Min Read
New Flavor: Mango Fruit Kalakand ಹೊಸ ರುಚಿ: ಮಾವಿನ ಹಣ್ಣಿನ ಕಲಾಕಂದ್

ಮಾವಿನಹಣ್ಣಿನ ಸೀಜನ್ ಸ್ಪೆಷಲ್ ಮಾವಿನಹಣ್ಣಿನ ಕಲಾಕಂದ್

WhatsApp Image 2023 05 27 at 5.30.45 PM
ಆಶಾ ರವಿಕುಮಾರ್

▪️ಬೇಕಾಗುವ ಸಾಮಗ್ರಿಗಳು▪️

▪️ಮಾವಿನಹಣ್ಣು 1
▪️ಹಾಲು 1/2 ಲೀಟರ್
▪️ಸಕ್ಕರೆ 4 ಚಮಚ
▪️ಏಲಕ್ಕಿ ಪುಡಿ ಸ್ವಲ್ಪ
▪️ಪಿಸ್ತಾ ಚೂರುಗಳು ಸ್ವಲ್ಪ
▪️ಕೇಸರಿ ದಳ ಸ್ವಲ್ಪ

▪️ಮಾಡುವ ವಿಧಾನ ▪️

▪️ಮಾವಿನ ಹಣ್ಣನ್ನು ಪೀಸ್ ಗಳನ್ನಾಗಿ ಮಾಡಿ.ಮಿಕ್ಸಿ ಜಾರಿಗೆ ಹಾಕಿ ಎರಡರಿಂದ ಮೂರು ಚಮಚ ನೀರನ್ನು ಹಾಕಿ ನುಣ್ಣಗೆ ರುಬ್ಬಿ.ಅದನ್ನು ಶೋಧಿಸಿ ಕೊಳ್ಳಬೇಕು.

▪️ಬಾಣಲಿಗೆ ಅರ್ಥ ಲೀಟರ್ ಹಾಲನ್ನು ಹಾಕಿ ಚೆನ್ನಾಗಿ ಕಾಯಿಸಿ ಕೊಳ್ಳಬೇಕು.ನಂತರ ಮಾವಿನಹಣ್ಣಿನ ಪ್ಯೂರಿಯನ್ನು ಹಾಕಿ ಮಿಕ್ಸ್ ಮಾಡಿ.ಅದು ಒಡೆದ ಹಾಗೆ ಆಗುತ್ತದೆ.ಇಲ್ಲವಾದರೆ ಸ್ವಲ್ಪ ನಿಂಬೆ ರಸವನ್ನು ಹಾಕಿ ಆಗ ಅದು ಒಡೆದಂತೆ ಆಗುತ್ತೆ.

ಆಗ ಅದನ್ನು ಚೆನ್ನಾಗಿ ಕುದಿಸಿಕೊಳ್ಳಬೇಕು.ಕೈಬಿಡದೇ ಕೈಯಾಡುತ್ತಿರಬೇಕು.ನಂತರ ಅದಕ್ಕೆ ಮೂರರಿಂದ ನಾಲ್ಕು ಚಮಚ ಸಕ್ಕರೆಯನ್ನು ಹಾಕಿ ಮಿಕ್ಸ್ ಮಾಡಿ. (ಮಾವಿನಹಣ್ಣಿನ ಸಿಹಿಯನ್ನು ನೋಡಿಕೊಂಡು ಸಕ್ಕರೆ ಹಾಕಿಕೊಳ್ಳಿ)ಆಮೇಲೆ ಕೇಸರಿ ದಳವನ್ನು,ಬೇಕಾದರೆ ಏಲಕ್ಕಿ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ.ಅದು ಗಟ್ಟಿಯಾಗಿ ಬರುವವರೆಗೂ ಕುದಿಸಿ. ನಂತರ ತುಪ್ಪ ಸವರಿದ ತಟ್ಟೆಗೆ ಹಾಕಿ ತಟ್ಟಿಕೊಳ್ಳಿ.ಅದರ ಮೇಲೆ ಕಟ್ ಮಾಡಿದ ಪಿಸ್ತಾ ನಿಂದ ಅಲಂಕರಿಸಿ. ಅದು ತಣ್ಣಗಾದ ಮೇಲೆ ಪೀಸ್ ಮಾಡಿ.ಮ್ಯಾಂಗೋ ಕಲಾಕಂದ ರೆಡಿ.

Share This Article
Leave a comment