ಸಚಿವ ಕೋಟ ಶ್ರೀನಿವಾಸ ಪೂಜಾರಿ ಬೆಂಗಾವಲು ವಾಹನ ಪಲ್ಟಿ: ಇಬ್ಬರಿಗೆ ಗಾಯ

Team Newsnap
1 Min Read
Minister Kota Srinivasa Pujari's escort vehicle overturns: Two injured ಸಚಿವ ಕೋಟ ಶ್ರೀನಿವಾಸ ಪೂಜಾರಿ ಬೆಂಗಾವಲು ವಾಹನ ಪಲ್ಟಿ: ಇಬ್ಬರಿಗೆ ಗಾಯ #thenewsnap #Latestnews #kannada_news #karnataka #accident #politician #Mandyanews #Mysuru #Bengaluru #NEWS #NH

ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಎಸ್ಕಾರ್ಟ್‌ ವಾಹನ ಮಂಗಳವಾರ ಬ್ರಹ್ಮಾವರ ತಾಲ್ಲೂಕಿನ ಉಪ್ಪೂರು ಕೆಜಿ ರೋಡ್ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪಲ್ಟಿಯಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ವಾಹನ ಪಲ್ಟಿಯಾಗಿದ್ದು ಸಚಿವರ ಬೆಂಗಾವಲು ಸಿಬ್ಬಂದಿ ಗಣೇಶ್ ಆಳ್ವ ಹಾಗೂ ಕಾರು ಚಾಲಕ ಚರಣ್ ಅವರಿಗೆ ಗಾಯಗಳಾಗಿವೆ.

ಸಿಬ್ಬಂದಿಯನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಇದನ್ನು ಓದಿ –ಇಂಗ್ಲೆಂಡ್ ವಿರುದ್ಧ ಬುಮ್ರಾ, ಶಮಿ ಬೆಂಕಿ ಬಿರುಗಾಳಿ ನಾಲ್ವರು ಸೊನ್ನೆಗೆ ಔಟ್.. 26ಕ್ಕೆ 5 ವಿಕೆಟ್

ಬೆಂಗಾವಲು ವಾಹನದ ಎದುರು ಸಂಚರಿಸುತಿದ್ದ ಲಾರಿ ಸಿಗ್ನಲ್ ಇಲ್ಲದೆ ದಾರಿ ಬದಲಿಸಿದ್ದು ಅಪಘಾತಕ್ಕೆ ಕಾರಣ ಎನ್ನಲಾಗಿದೆ.

Share This Article
Leave a comment