ಐಪಿಎಲ್ 20-20ಯ 49ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಸ ವಿರುದ್ಧ, ಮುಂಬೈ ಇಂಡಿಯನ್ಸ್ ತಂಡ 9 ವಿಕೆಟ್‌ಗಳ ಅಂತರದಿಂದ ಜಯ ಗಳಿಸಿತು.
ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಎಮ್‌ಐ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ಡಿಸಿ ತಂಡದಿಂದ ಓಪನಿಂಗ್ ಬ್ಯಾಟ್ಸ್‌ಮನ್‌ಗಳಾಗಿ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಫೀಲ್ಡಿಗಿಳಿದರು. ಆದರೆ ಆಟದ ಆರಂಭ ಉತ್ತಮವಾಗಿರಲಿಲ್ಲ. ಶಾ 11 ಬಾಲ್‌ಗಳಿಗೆ 10 ರನ್ ಗಳಿಸಿದರೆ, ಧವನ್ ಶೂನ್ಯಕ್ಕೆ ಪೆವಿಲಿಯನ್ ಸೇರಿದರು. ನಂತರ ಬಂದ ತಂಡದ ನಾಯಕ ಎಸ್. ಐಯ್ಯರ್ 29 ಬಾಲ್‌ಗಳಿಗೆ 25 ರನ್ ಹಾಗೂ 24 ಬಾಲ್‌ಗಳಿಗೆ 21 ರನ್ ಗಳಿಸಿದರು. ಒಟ್ಟಾರೆಯಾಗಿ ಡಿಸಿ ಪ್ರದರ್ಶನ ಕಳಪೆಯಿಂದ ಕೂಡಿತ್ತು. ಡಿಸಿ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 110 ರನ್ ಮಾತ್ರ ಗಳಿಸಿತು.
ಇತ್ತ ಡಿಸಿ ಆಟಕ್ಕೆ ಪ್ರತಿಯಾಗಿ ಎಮ್‌ಐ ತಂಡದಿಂದ ಮೈದಾನಕ್ಕೆ ಆರಂಭಿಕ ಆಟಗಾರರಾಗಿ ಐ. ಕಿಶನ್ ಹಾಗೂ ಡಿ. ಕಾಕ್ ಎಂಟ್ರಿ ನೀಡಿದರು. ಕಿಶನ್ 47 ಬಾಲ್‌ಗಳಿಗೆ 72 ರನ್ ಹಾಗೂ ಕಾಕ್ 28 ಬಾಲ್‌ಗಳಿಗೆ 26 ರನ್ ಗಳಿಸಿದರು. ಎಮ್‌ಐ ತಂಡ 14.2 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 111 ರನ್ ಗಳಿಸಿ ಪಂದ್ಯದಲ್ಲಿ ಗೆದ್ದಿತು.
More Stories
ಓದಿನ ಮಹತ್ವ
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು