ಏಕತಾ ಪ್ರತಿಮೆಯ ಬಳಿ ತೆರಳಿ ಗೌರವ ಅರ್ಪಿಸಿದ ಪ್ರಧಾನಿ ಮೋದಿ

Team Newsnap
1 Min Read
Picture credits : Instagram

ಭಾರತದ ಉಕ್ಕಿನ ಮನುಷ್ಯ ಎಂದೇ ಖ್ಯಾತಿ ಪಡೆದಿರುವ ಮಾಜಿ ಗೃಹ ಸಚಿವ ದಿವಂಗತ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಹುಟ್ಟುಹಬ್ಬ.

145ನೇ ಹುಟ್ಟುಹಬ್ಬದ ಪ್ರಯುಕ್ತ ಇಂದು ಎರಡು ದಿನಗಳ ಗುಜರಾತ್ ಪ್ರವಾಸಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ, ಪಟೇಲ್ ಅವರ ಸ್ಟಾಚು ಆಫ್ ಯೂನಿಟಿಗೆ ತೆರಳಿ ಅವರಿಗೆ ಗೌರವಪೂರ್ಣ ನಮನಗಳನ್ನು ಸಲ್ಲಿಸಿದ್ದಾರೆ.

ಸರ್ದಾರ್ ವಲ್ಲಭಾಯಿ ಪಟೇಲ್ ಹುಟ್ಟುಹಬ್ಬವನ್ನು ಭಾರತದಲ್ಲಿ “ರಾಷ್ಟ್ರೀಯ ಏಕತಾ ದಿನ” ಎಂದು ಆಚರಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಪಟೇಲರ ನೆನಪಿನಲ್ಲಿ ಕೇವಾಡಿಯ-ಸಬರಮತಿ ಸೀಪ್ಲೇನ್ ಸೇವೆಯನ್ನೂ ಉದ್ಘಾಟಿಸಿದ್ದಾರೆ.

ಸರ್ದಾರ್ ವಲ್ಲಭಾಯಿ ಪಟೇಲ್ ಏಕತಾ ಪ್ರತಿಮೆಯ ಬಳಿ ಬೆಳಿಗ್ಗೆ 8 ಗಂಟೆ ಸುಮಾರಿಗೆ ಪ್ರಧಾನಿ ನರೇಂದ್ರ ಮೋದಿ ಹೂವನ್ನು ಅರ್ಪಿಸುವ ಮೂಲಕ ಗೌರವ ಸಲ್ಲಿಸಿದ್ದಾರೆ. ತದನಂತರ ಅವರು ರಾಷ್ಟ್ರದ ಐಕ್ಯತೆ ಮತ್ತು ಆಂತರಿಕ ಭದ್ರತೆಯನ್ನು ಬಲಪಡಿಸುವ ಮತ್ತು ಕಾಪಾಡುವ ಪ್ರತಿಜ್ಞೆಯನ್ನು ಓದಿದ್ದಾರೆ.

ಇದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಮತ್ತು ನಾಳೆ ಗುಜರಾತ್​ನಲ್ಲಿ ಅನೇಕ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಭಾಗಿಯಾಗಲಿದ್ದಾರೆ. ಅಲ್ಲದೆ, ಕೆಲವು ಅಭಿವೃದ್ಧಿ ಯೋಜನೆಗಳಿಗೂ ಚಾಲನೆ ನೀಡಲಿದ್ದಾರೆ.

Share This Article
Leave a comment