ಮೈಸೂರಿನಲ್ಲಿ ಮೆಟ್ರೋ ನಿಯೋ ಯೋಜನೆ ಜಾರಿಗೆ ಸಿದ್ಧತೆ: ಬರಲಿವೆ ಹೊಸ ರೂಪದ ಬಸ್‌ಗಳು

Team Newsnap
1 Min Read

ಅರಮನೆ ನಗರಿ ಎಂದು ಹೆಸರಾಗಿರುವ ಮೈಸೂರು ನಗರಕ್ಕೆ ಮೆಟ್ರೋ ನಿಯೋ ಅಥವಾ ಮೆಟ್ರೋ ಲೈಟ್ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ನಡೆದಿದೆ. ಇದರಡಿ 18 ರಿಂದ 25 ಮೀಟರ್ ಉದ್ದದ ಬಸ್‌ಗಳು ಸಂಚರಿಸುತ್ತವೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮೂಡಾ)ದ ಅಧ್ಯಕ್ಷ ಎಚ್.ವಿ. ರಾಜೀವ್ ಹೇಳಿದ್ದಾರೆ.


ಜನಸಂದಣಿ ಇರುವ ಪ್ರದೇಶಗಳಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮೆಟ್ರೋ ಲೈಟ್ ಅಥವಾ ಮೆಟ್ರೋ ನಿಯೋ ಯೋಜನೆ ಇದಾಗಿದ್ದು, ದೇಶದ ಟು ಟೈಯರ್ ಸಿಟಿಗಳಲ್ಲಿ ಜಾರಿಗೆ ತರಲಾಗುತ್ತದೆ. ಕೇಂದ್ರ ಸರ್ಕಾರದ ಅನುಮೋದನೆ ಪಡೆದು ಅನುಷ್ಠಾನಗೊಳಿಸಲಾಗುತ್ತದೆ.


ದಕ್ಷಿಣ ಭಾರತದ ಪೈಕಿ ಮೈಸೂರು ಈ ಯೋಜನೆ ಜಾರಿಗೊಳಿಸಿದ ಪ್ರಥಮ ನಗರವೆಂಬ ಖ್ಯಾತಿಪಡೆಯಲು ಶ್ರಮಿಸಲಾಗುವುದು ಎಂದರು. ಮೂಡಾ ವತಿಯಿಂದ ಮೈಸೂರಿನಲ್ಲಿ ಗುಂಪು ಮನೆ ಇಲ್ಲವೇ ಅಪಾರ್ಟ್ಮೆಂಟ್ ನಿರ್ಮಿಸಲಾಗುವುದು ಎಂದು ಅವರು ಹೇಳಿದರು.

Share This Article
Leave a comment