ನಾಳೆ ಮಧ್ಯರಾತ್ರಿ ಉಲ್ಕಾಪಾತ; ಬರಿಗಣ್ಣಿನಲ್ಲಿಯೇ ನೋಡಲು ಅಭ್ಯಂತರವಿಲ್ಲ

meteor , shower , space
Meteor shower at midnight tomorrow; Treat to naked eye ನಾಳೆ ಮಧ್ಯರಾತ್ರಿ ಉಲ್ಕಾಪಾತ; ಬರಿಗಣ್ಣಿನಲ್ಲಿಯೇ ನೋಡಲು ಅಭ್ಯಂತರವಿಲ್ಲ

ಭಾರತದಲ್ಲಿ ಡಿ. 13ರ ಮಧ್ಯರಾತ್ರಿ ಮತ್ತು ಡಿ. 14ರ ಬೆಳಗ್ಗಿನ ಹೊತ್ತು ಆಕಾಶದಲ್ಲಿ ಸ್ಪಷ್ಟವಾಗಿ ಉಲ್ಕಾಪಾತ ( Meteor Shower ) ನೋಡುಬಹುದಾಗಿದೆ.

ಡಿ. 13ರ ಮಧ್ಯರಾತ್ರಿ 2 ಗಂಟೆಯಿಂದ 3 ಗಂಟೆ ಸಮಯಕ್ಕೆ ಉಲ್ಕಾಪಾತ ತನ್ನ ಉತ್ತುಂಗಕ್ಕೆ ತಲುಪಲಿದೆ.ನಾಗಮಂಗಲ ಬಳಿ: ಸ್ವಿಫ್ಟ್ – ಇನೋವಾ ಕಾರ್ ನಡುವೆ ಡಿಕ್ಕಿ – ಐವರು ಸಾವು

ಈ ಉಲ್ಕಾಪಾತ ನೋಡಲು ದೂರದರ್ಶಕದ ಆವಶ್ಯಕತೆ ಇಲ್ಲ. ಬರಿ ಕಣ್ಣಿನಿಂದ ಇದನ್ನು ವೀಕ್ಷಿಸಬಹುದಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಈ ವರ್ಷ ಡಿ. 13ರ ಮಧ್ಯರಾತ್ರಿ 100 ಕ್ಕೂ ಹೆಚ್ಚು ಉಲ್ಕಾಪಾತಗಳು ಭೂಮಿಯ ಸಮೀಪ ಬರಲಿವೆ. ಮೋಡವಿಲ್ಲದೆ, ವಾತಾವರಣ ತಿಳಿಯಾಗಿದ್ದರೆ ಹಾಗೂ ಚಂದ್ರನ ಬೆಳಕು ಕಡಿಮೆ ಇದ್ದರೆ ಇದನ್ನು ಸ್ಪಷ್ಟವಾಗಿ ಆಸಕ್ತರು ನೋಡಬಹುದಾಗಿದೆ.

ಉಲ್ಕಾಪಾತವನ್ನು ವೀಕ್ಷಿಸಲು ಬೆಂಗಳೂರಿನ ಜವಾಹರಲಾಲ್‌ ತಾರಾಲಯದಲ್ಲಿ ಅಂದು ವಿಶೇಷವಾದ ವ್ಯವಸ್ಥೆ ಮಾಡಲಾಗಿದೆ.

Leave a comment

Leave a Reply

Your email address will not be published. Required fields are marked *

error: Content is protected !!