ಹನಿಟ್ರ್ಯಾಪ್ ಗೆ ಬಲಿ ಬಿದ್ದ ಟೆಕ್ಕಿ : ಮಾಯಾಂಗನೆಗೆ ಕೊಟ್ಟಿದ್ದು ಬರೋಬರಿ 20 ಲಕ್ಷ !

Team Newsnap
1 Min Read
Men fell victim to honeytrap: women received 20 lakhs ಹನಿಟ್ರ್ಯಾಪ್ ಗೆ ಬಲಿ ಬಿದ್ದ ಟೆಕ್ಕಿ : ಮಾಯಾಂಗನೆ ಕೊಟ್ಟಿದ್ದು ಬರೋಬರಿ 20 ಲಕ್ಷ !

ಬೆಂಗಳೂರಿನಲ್ಲಿ ಇತ್ತೀಚೆಗೆ ಹನಿಟ್ರ್ಯಾಪ್ ಜಾಲ ಹೆಚ್ಚಾಗಿದೆ. ಈ ಜಾಲದೊಳಗೆ ಸಿಲುಕಿ ಹೊರಬರಲಾರದೇ ಟೆಕ್ಕಿಯೊಬ್ಬರು ಸುಳಿಗೆ ಸಿಲುಕಿ ಮಾಯಾಂಗನೆ ಬ್ಲಾಕ್ ಮೇಲ್ ಗೆ ಹೆದರಿ 20 ಲಕ್ಷ ರು ಕಳೆದುಕೊಂಡಿದ್ದಾರೆ.

ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಟೆಕ್ಕಿಗೆ ಬರೋಬ್ಬರಿ 3 ಲಕ್ಷ ಸಂಬಳ. ಪತ್ನಿ ಇಬ್ಬರು ಮಕ್ಕಳು ಸುಂದರ ಸಂಸಾರದಲ್ಲಿ ಕೈ ಕೊಟ್ಟಿದ್ದೇ ಹನಿಟ್ರ್ಯಾಪ್ ಜಾಲ.ರೈತರನ್ನು ಮದುವೆಯಾಗುವ ಯುವತಿಗೆ 10 ಲಕ್ಷ ರು. ಪ್ರೋತ್ಸಾಹ ಧನಕ್ಕೆ ಆಗ್ರಹ

ಆರಂಭದ ದಿನಗಳಲ್ಲಿ ಸ್ನೇಹಿತನ ಮೂಲಕ ಪರಿಚಯವಾದ ಮಾಯಂಗನೆ ನಿಧಾನವಾಗಿ ಇವರ ಸಲುಗೆ ಪಡೆದುಕೊಂಡು ಸೆಲ್ಫಿ ಫೋಟೋ ವೀಡಿಯೋ ತೆಗೆದುಕೊಳ್ಳುತ್ತಿದ್ದಳು. ಅನಾರೋಗ್ಯದ ಕಾರಣವೊಡ್ಡಿ, ಆಗಾಗ ದುಡ್ಡನ್ನು ಪಡೆದುಕೊಳ್ಳುತ್ತಿದ್ದಳು. ನಂತರ ನಿಧಾನವಾಗಿ ಹನಿಟ್ರ್ಯಾಪ್ ವ್ಯೂಹ ಹೆಣೆದು ಟೆಕ್ಕಿಯನ್ನು ಬಲೆಗೆ ಬೀಳಿಸಿದ್ದಳು.

ಮೊದಮೊದಲು ಅನಾರೋಗ್ಯದ ನೆಪದಲ್ಲಿ ದುಡ್ಡು ವಸೂಲಿ ಮಾಡಿದ ಆಕೆ ಬಳಿಕ ನೇರವಾಗಿ ಲಕ್ಷ ಲಕ್ಷ ಹಣ ಕೊಡುವಂತೆ ಧಮ್ಕಿ ಹಾಕಲು ಆರಂಭಿಸಿದಳು. ಹಣ ಕೊಡದಿದ್ದರೆ ಸೆಲ್ಫಿ, ವೀಡಿಯೋ ವೈರಲ್ ಮಾಡೋದಾಗಿ ಬೆದರಿಕೆ ಹಾಕಿದಳು.

ಇಷ್ಟಕ್ಕೂ ಒಪ್ಪದಿದ್ದರೆ ಟೆಕ್ಕಿಯ ಪತ್ನಿಗೆ ಫೋಟೋ, ವೀಡಿಯೋ ಕಳಿಸುವ ಬೆದರಿಕೆ ಒಡ್ಡಿದಳು. 20 ಲಕ್ಷ ಹಣ ಕೊಟ್ಟ ಮೇಲೂ ಟಾರ್ಚರ್ ನಿಂತಿಲ್ಲ. ಇದರಿಂದ ಬೇಸತ್ತ ಟೆಕ್ಕಿ ಮತ್ತೆ ಹಣ ಕೊಡೋದಿಲ್ಲ ಎಂದಾಗ ಮಹಿಳೆಯಿಂದ ದೂರು ಕೊಡುವ ಬಗ್ಗೆ ಬ್ಲಾಕ್‍ಮೇಲ್ ಮಾಡಲಾಯಿತು. ಟೆಕ್ಕಿ ಕೆಲಸ ಮಾಡುವ ಕಂಪನಿಗೂ ಮೇಲ್ ಬರತೊಡಗಿತು.

ಬಳಿಕ ಟೆಕ್ಕಿಯನ್ನು ಕಂಪನಿ ಕೆಲಸದಿಂದ ವಜಾಗೊಳಿಸಿತು. ಮತ್ತೆ ಹಣ ಕೊಡಲು ಒಪ್ಪದಿದ್ದಾಗ ಪತ್ನಿಗೂ ಫೋಟೋ, ವೀಡಿಯೋ ರವಾನೆ ಮಾಡಿದ ನಂತರ ಟೆಕ್ಕಿ ಸಂಸಾರ ಬೀದಿಗೆ ಬಂತು. ಹೆಂಡತಿ ಬಿಟ್ಟು ಹೋದಳು.ಈಗ ಟೆಕ್ಕಿ ಹನಿಟ್ರ್ಯಾಪ್ ಮಯಾಂಗನೆ ವಿರುದ್ದ ಪೋಲಿಸರಿಗೆ ದೂರು ನೀಡಿದ್ದಾರೆ.

Share This Article
Leave a comment