ಯಾರೇ ವಿರೋಧ ಮಾಡಿದರೂ ಸರಿ. ಸುಪ್ರೀಂ ಕೋರ್ಟ್ನ ಆದೇಶದಂತೆ ಮೇಕೆದಾಟು ಅಣೆಕಟ್ಟು ನಿರ್ಮಾಣ ಮಾಡೇ ತೀರುತ್ತೇವೆ ಎಂದು ಸಂಸದ ಜಿ.ಎಂ
ಸಿದ್ದೇಶ್ವರ ದಾವಣಗೆರೆಯಲ್ಲಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದೇಶ್ವರ ಮೇಕೆದಾಟು ವಿಚಾರವಾಗಿ ಅಣ್ಣಾ ಮಲೈ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಹೇಳಿದ್ದಾರೆ. ಸುಪ್ರೀಂ ಕೋರ್ಟ್ನ ಆದೇಶವಿದೆ. ಯಾರೇ ವಿರೋಧ ಮಾಡಿದರೂ ಬಿಡಲ್ಲ. ಯಾರಿಗೂ ಸೊಪ್ಪು ಹಾಕಲ್ಲ.. ಮೇಕೆದಾಟನಲ್ಲಿ ಡ್ಯಾಂ ಕಟ್ಟೋದು ನಮ್ಮ ಹಕ್ಕು ನಾವು ಕಟ್ಟೇ ಕಟ್ಟುತ್ತೇವೆ ಎಂದಿದ್ದಾರೆ.
ನಾನೂ ಟ್ಯಾಕ್ಸ್ ಕದ್ದಿದ್ದೆ !
ನಾನು ಟ್ಯಾಕ್ಸ್ ಕದ್ದಿದ್ದೆ ಅದಕ್ಕೆ ನನ್ನ ಮೇಲೆ ಐಟಿ ದಾಳಿ ನಡೆದಿತ್ತು. ಆ ಮೂಲಕ ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಮೇಲೆ ಇಡಿ ದಾಳಿ ಕುರಿತು ಮಾತನಾಡಿದ ಸಿದ್ದೇಶ್ವರ್ ಐಟಿ-ಇಡಿ ಸ್ವಾತಂತ್ರ್ಯ ಸಂಸ್ಥೆಗಳು.. ನನ್ನ ಮೇಲೂ ಐಟಿ ರೆಡ್ ಆಗಿತ್ತು.. ಯಾರು ಭ್ರಷ್ಟರು ಇರ್ತಾರೆ ಹಾಗೂ ಯಾರು ಟ್ಯಾಕ್ಸ್ ಕದಿತಾರೆ ಅವರ ಮೇಲೆ ರೇಡ್ ಮಾಡ್ತಾರೆ.. ನಾನು ಟ್ಯಾಕ್ಸ್ ಕದ್ದಿದ್ದೆ ಹೀಗಾಗಿ ನನ್ನ ಮೇಲು ರೇಡ್ ಆಗಿದೆ ಎಂದಿದ್ದಾರೆ.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ