ದೇವೇಗೌಡ – ಬೊಮ್ಮಾಯಿ ಭೇಟಿ: ಈಶ್ವರಪ್ಪ ಸಮರ್ಥನೆ- ಪ್ರೀತಂಗೆ ಮನವರಿಕೆ ಮಾಡುವ ಪ್ರಯತ್ನ

Team Newsnap
1 Min Read
Image source : google

ಮಾಜಿ ಪ್ರಧಾನಿಗಳು, ರೈತ ನಾಯಕರು ಎಂಬ ಭಾವನೆಯಿಂದ ಎಚ್.ಡಿ.ದೇವೇಗೌಡರನ್ನು ಮುಖ್ಕಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ್ದಾರೆ ವಿನಃ ಜನತಾ ದಳ(ಎಸ್) ನಾಯಕರು ಅಂತ ಅಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ವಿಶ್ಲೇಸಿ, ಭೇಟಿಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.‌

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಈಶ್ವರಪ್ಪ
ಹಾಸನದ ಶಾಸಕ ಪ್ರೀತಂಗೌಡರಿಗೆ ಈ ಭೇಟಿಯ ಉದ್ದೇಶವನ್ನು
ಮನವರಿಕೆ ಮಾಡಿಸಲಾಗುವುದು ಎಂದರು.

ದೇವೇಗೌಡ್ರು, ರೇವಣ್ಣ, ಎಚ್.ಡಿ. ಕುಮಾರಸ್ವಾಮಿಯವರ ಮುಂದೆ ಹಾಸನ ಜಿಲ್ಲೆಯಲ್ಲಿ ಶಕ್ತಿಮೀರಿ ಬಿಜೆಪಿಯ ಒಬ್ಬ ಸಾಮಾನ್ಯ ಕಾರ್ಯಕರ್ತ ಪ್ರೀತಂಗೌಡ ಶಾಸಕರಾಗಿದ್ದಾರೆ. ತಮ್ಮ ಜಿಲ್ಲೆಯಲ್ಲಿ ಸಂಘಟನೆಯನ್ನು ಕಟ್ಟಬೇಕು ಎಂಬ ಪ್ರಯತ್ನ ಶಾಸಕರದ್ದಾಗಿದೆ. ಇಂತಹ ವೇಳೆ ಮುಖ್ಯಮಂತ್ರಿಗಳು ದೇವೇಗೌಡರನ್ನು ಭೇಟಿ ಮಾಡಿದ್ದು ಸಮಾಧಾನ ತಂದಿಲ್ಲವೆನಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ನಮ್ಮ ರಾಜ ಕಾರಣಕ್ಕೆ, ಬಿಜೆಪಿ ಚಟುವಟಿಕೆಗೆ ಅಲ್ಲಿ(ಹಾಸನಜಿಲ್ಲೆ) ತೊಂದರೆಯಾಗುವುದಿಲ್ಲ ಎಂಬ ಮನವರಿಕೆಯನ್ನು ಮಾಡಿಕೊಡುತ್ತೇವೆ ಎಂದು ಹೇಳಿದರು.

Share This Article
Leave a comment