ನೀವು ತುಂಬಾ ಕೊಲೆಗಳನ್ನು ಮಾಡುತ್ತೀರಿ, ಪ್ರವಾದಿಗಾಗಿ ಒಂದು ಕೊಲೆಯನ್ನು ಏಕೆ ಮಾಡಬಾರದು? ಎಂದು ಮುಸ್ಲಿಂ ಮೂಲಭೂತವಾದಿ ರಿಯಾಜ್ ಮೊಹಮ್ಮದ್ ಅಕ್ತಾರಿ ಉದಯಪುರ ಹತ್ಯೆಗೆ ಪ್ರಚೋದನೆ ನೀಡಿದ್ದ ವೀಡಿಯೋ ಈಗ ಜಾಲತಾಣದಲ್ಲಿ ವೈರಲ್ ಆಗಿದೆ.
ಉದಯಪುರದಲ್ಲಿ ಟೈಲರ್‌ನನ್ನು ಇಬ್ಬರು ಮುಸ್ಲಿಂ ಮೂಲಭೂತವಾದಿ ಯುವಕರು ಶಿರಚ್ಛೇದನ ಮಾಡಿ ಹತ್ಯೆಗೈದಿದ್ದರು.
ಈ ಹತ್ಯೆಗೆ ಪ್ರಚೋದನೆ ನೀಡಿದ್ದ ಮತ್ತೊಬ್ಬ ಮುಸ್ಲಿಂ ಮೂಲಭೂತವಾದಿಯ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದೆ. ಆರೋಪಿಗಳು ರಾಜಾಸ್ಥಾನದಲ್ಲಿ ಬಂಧನವಾಗುವುದಕ್ಕೆ ಕೆಲವೇ ಕ್ಷಣಗಳಿಗೂ ಮುನ್ನವೇ ಜೂನ್ 17ರಂದೇ ಮಾಡಿದ್ದ 2:20 ನಿಮಿಷದ ವೀಡಿಯೋ ವೈರಲ್ ಆಗಿದೆ.
ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಪ್ರವಾದಿ ವಿರೋಧಿಗಳ ಹತ್ಯೆಗೆ ಪ್ರಚೋದನೆ ನೀಡುವ ಜೊತೆಗೆ ರಾಜಾಸ್ಥಾನ ಸರ್ಕಾರಕ್ಕೂ ಪರೋಕ್ಷವಾಗಿ ಸವಾಲು ಹಾಕಿದ್ದಾನೆ.
ನಾನು ನನ್ನ ಮುಸ್ಲಿಂ ಬಂಧುಗಳಿಗೆ ಮತ್ತೊಂದು ಸಂದೇಶ ನೀಡಲು ಬಯಸುತ್ತೇನೆ. ಎಲ್ಲರಿಗೂ ನನ್ನ ಕುಟುಂಬ ಏನಾಗುತ್ತದೆ? ಪರಿವಾರಕ್ಕೆ ಏನಾಗುತ್ತದೆ? ಎನ್ನುವ ಚಿಂತೆ ಇರುತ್ತದೆ. ನನಗೂ ಒಂದು ಕುಟುಂಬವಿದೆ, ಕೆಲಸವಿದೆ. ಅದರ ಚಿಂತೆ ಬಿಟ್ಟುಬಿಡಿ.
ನೀವು ಎಷ್ಟೋ ಕೊಲೆಗಳನ್ನು ಮಾಡುತ್ತೀರಿ ಪ್ರವಾದಿಗಾಗಿ ಏಕೆ ಒಂದು ಕೊಲೆಯನ್ನು ಮಾಡಬಾರದು? ಹೆದರಬೇಡಿ, ನಮಗೆ ಅಲ್ಹಾನ ಆಶ್ರಯವಿದೆ. ಹೆಚ್ಚೆಂದರೆ ಜೈಲಿಗೆ ಹಾಕುತ್ತಾರೆ ಎಂದಿದ್ದಾನೆ.
ಮಹಾ ಸಿಎಂಉದ್ಧವ್ ಠಾಕ್ರೆಗೆ ಅಗ್ನಿಪರೀಕ್ಷೆ: ಜೂನ್ 30 ರಂದು ವಿಶ್ವಾಸ ಮತಕ್ಕೆ ರಾಜ್ಯಪಾಲರ ಸೂಚನೆ
ಉದಯಪುರದಲ್ಲಿ ದೊಡ್ಡದೊಡ್ಡ ದಾದಾಗಳಿಗೆ ನಾನೊಂದು ಸವಾಲು ಹಾಕುತ್ತೇನೆ. ನನ್ನಂಥವರನ್ನು ಕೊಲ್ಲಬೇಕು, ನಮ್ಮ ಆಸ್ತಿಗಳನ್ನು ಜಪ್ತಿ ಮಾಡಬೇಕು ಅನ್ನುವವರು ಗಟ್ಸ್ ಇದ್ದರೆ ಮಾಡಲಿ, ಇಲ್ಲವಾದರೆ ಬಳೆಗಳನ್ನು ತೊಟ್ಟುಕೊಳ್ಳಲಿ ಎಂದು ಸವಾಲು ಹಾಕಿದ್ದಾನೆ.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ