October 7, 2022

Newsnap Kannada

The World at your finger tips!

politics, maharstra

ಮಹಾ ಸಿಎಂ ಉದ್ಧವ್ ಠಾಕ್ರೆಗೆ ಅಗ್ನಿಪರೀಕ್ಷೆ: ಜೂನ್ 30 ರಂದು ವಿಶ್ವಾಸ ಮತಕ್ಕೆ ರಾಜ್ಯಪಾಲರ ಸೂಚನೆ

Spread the love

ಮಂಗಳವಾರ ರಾತ್ರಿ ಮಹಾರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯೊಂದು ಜರುಗಿದೆ. ಸಿಎಂ ಉದ್ದವ್ ಠಾಕ್ರೆಗೆ ವಿಶ್ವಾಸ ಮತಯಾಚನೆಗೆ ಮಹಾರಾಷ್ಟ್ರದ ರಾಜ್ಯಪಾಲ ಅನುಮತಿ ನೀಡಿದ್ದಾರೆ.

ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಈ ಅನುಮತಿಯಿಂದಾಗಿ ಸಿಎಂ ಉದ್ಧವ್ ಠಾಕ್ರೆ ವಿಶ್ವಾಸ ಮತಯಾಚನೆ ಮಾಡಲಿದ್ದಾರೆ. ಜೂನ್ 30ರಂದು (ಗುರುವಾರ )ವಿಶ್ವಾಸಮತ ಸಾಬೀತಿಗೆ ಅವಕಾಶ ಮಾಡಿಕೊಡಲಾಗಿದೆ.

ವಿಶ್ವಾಸ ಮತಯಾತನೆಗಾಗಿ ದೇವೇಂದ್ರ ಫಡ್ನವೀಸ್ ಮನವಿ ಮಾಡಿದ್ದರು. ಫಡ್ನವೀಸ್ ಭೇಟಿ ಬಳಿಕ ಅನುಮತಿ ನೀಡಿರುವ ಕೋಶ್ಯಾರಿ ಜೂನ್ 30 ರಂದು ವಿಶೇಷ ಅಧಿವೇಶನ ಕರೆದಿದ್ದಾರೆ.

error: Content is protected !!