January 13, 2025

Newsnap Kannada

The World at your finger tips!

election,BJP,Politics

BJP ticket announcement - High command shock to Vijayendra

ಬಿಜೆಪಿಯಲ್ಲಿ ಭಾರಿ ಬೆಳವಣಿಗೆ – ಶಾಸಕಾಂಗ ಸಭೆಗೆ ಹೈಕಮಾಂಡ್ ಸೂಚನೆ – ಆರ್ ಎಸ್ ಎಸ್ ರಂಗ‌ಪ್ರವೇಶ

Spread the love

ಸಿಎಂ ಯಡಿಯೂರಪ್ಪ ನವರ ಅಧಿಕಾರ ಬದಲಾವಣೆಗೆ ಬಿಜೆಪಿ ಯಲ್ಲಿ ಭರದ ಸಿದ್ದತೆ ನಡೆಯುತ್ತಿದೆ.

ಪ್ರಮುಖ ಜೂನ್ ಮೊದಲ ವಾರ ಶಾಸಕಾಂಗ ಸಭೆ ನಡೆಸುವಂತೆ ಬಿಜೆಪಿ ಹೈಕಮಾಂಡ್ ಸೂಚನೆ ನೀಡಿರುವ ಬೆನ್ನಲ್ಲೇ ಸಿಎಂ ಜೂನ್ 7 ಕ್ಕೆ ಶಾಸಕರ ಸಭೆ ನಿಗದಿ ಮಾಡಿದ್ದಾರೆ.‌

ಮತ್ತೊಂದು ಬೆಳವಣಿಗೆಯಲ್ಲಿ ರಾಜ್ಯ ಆರ್ ಎಸ್ ಎಸ್ ನಾಯಕ ಮುಕುಂದ್ ಅವರು ಸಿಎಂ ಅವರನ್ನು ಭೇಟಿ ಮಾಡಿ 1 ಗಂಟೆಗಳ ಕಾಲ ಮಾತುಕತೆ ನಡೆಸಿರುವುದೂ ಕೂಡ ಸಿಎಂ ಬದಲಾವಣೆ ಚರ್ಚೆಗೆ ಮಹತ್ವದ ಬಂದಿದೆ.

ರಾಜ್ಯದಲ್ಲಿ ಈಗ ಕೋವಿಡ್ ಅಬ್ಬರವಿದೆ. ಈ ನಡುವೆಯೂ ಬಿಜೆಪಿಯಲ್ಲಿ ದಿಢೀರ್ ರಾಜಕೀಯ ಬೆಳವಣಿಗೆಗಳಿಗೆ ಜೀವ ಬಂದಿದೆ.

ಬಿಜೆಪಿ ಶಾಸಕರ ಸಭೆ ಕುರಿತಂತೆ ಸಿಎಂ ಯಡಿಯೂರಪ್ಪ ನಿನ್ನೆ ನಡೆದಿದ್ದ ಸಂಪುಟ ಸಭೆಯಲ್ಲೂ ಸಿಎಂ ಸುಳಿವು ನೀಡಿ ಜೂನ್ 7ರಂದು ಪಕ್ಷದ ಶಾಸಕರ ಸಭೆಗೆ ನಿರ್ಧರಿಸಿರುವುದಾಗಿ ಹೇಳಿದ್ದಾರೆ.

ಈ ಶಾಸಕರ ಸಭೆಯಲ್ಲಿನ ನಿರ್ದಿಷ್ಟ ಅಜೆಂಡ ಕುರಿತು ಸಿಎಂ ಏನೂ ಹೇಳಿಲ್ಲ. ಆದರೂ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಆಗುತ್ತದೆ ಎಂಬ ಪ್ರಶ್ನೆ ಮೂಡಿದೆ.

ಸಿಎಂ ಬದಲಾವಣೆ ಬಗ್ಗೆ ಚರ್ಚೆ ಆಗುತ್ತೆ ಅಂತ ಬಿಎಸ್‍ವೈ ವಿರೋಧಿ ಬಣ ಹೇಳುತ್ತಿದೆ. ಆದರೆ ಬಿಎಸ್‍ವೈ ಬಣ ಮಾತ್ರ ಕೋವಿಡ್ ನಿರ್ವಹಣೆ ಬಗ್ಗೆಯಷ್ಟೇ ಚರ್ಚೆ ಆಗುತ್ತೆ ಎನ್ನುತ್ತಿದೆ.

Copyright © All rights reserved Newsnap | Newsever by AF themes.
error: Content is protected !!