ಭಾರತದ ನಿಯಮಾವಳಿಗೆ ತಲೆಬಾಗಿದ ಗೂಗಲ್, ಯೂಟ್ಯೂಬ್ ಸೇಫ್

Team Newsnap
1 Min Read

ಭಾರತದ ಹೊಸ ಡಿಜಿಟಲ್ ನಿಯಮಗಳಿಗೆ ಕೊನೆಗೂ ತಲೆಬಾಗಿದ ಗೂಗಲ್​, ಯೂಟ್ಯೂಬ್. ಆದರೆ ಫೇಸ್ಬುಕ್, ಟ್ವಿಟರ್ ಮತ್ತು ಇನ್​ಸ್ಟಾಗ್ರಾಮ್​ ಈವರೆಗೂ ನಿಯಮಾ ವಳಿಗಳನ್ನು ಅಳವಡಿಸಿ ಕೊಂಡಿಲ್ಲ.

ಡಿಜಿಟಲ್​ ಮಾಹಿತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರೂಪಿಸಿರುವ ನಿಯಮಾವಳಿಗಳು ಇನ್ನೇನು ಜಾರಿಗೆ ಬರಲಿವೆ .

ಕೇಂದ್ರ ದ ನಿಯಮಾವಳಿಗಳನ್ನು ಒಪ್ಪದ ಸಾಮಾಜಿಕ ಜಾಲ ತಾಣಗಳಿಗೆ ಇಂದಿನಿಂದ ಕಡಿವಾಣ ಬೀಳುವ ಸಾಧ್ಯತೆ ಇದೆ.

ಗೂಗಲ್ ಮತ್ತು ಯೂಟ್ಯೂಬ್ ಭಾರತದ ಹೊಸ ಡಿಜಿಟಲ್ ನಿಯಮಗಳನ್ನು ಅನುಸರಿಸುವ ಗುರಿ ಹೊಂದಿದ್ದೇವೆ ಅಂತಾ ಮಾಹಿತಿ ನೀಡಿವೆ.

ನಾವು ಭಾರತದ ನಿಯಮಾವಳಿ ಗಳನ್ನು ಗೌರವಿಸುತ್ತೇವೆ ಮತ್ತು ಕಾನೂನಿಗೆ ಬಾಹಿರ ಹಾಗೂ ಕೆಲ ವಿಷಯಗಳನ್ನು ತೆಗೆದುಹಾಕುವ ಸರ್ಕಾರದ ನೀತಿಗಳಿಗೆ ಸ್ಪಂದಿಸುವ ಸುದೀರ್ಘ ಇತಿಹಾಸವನ್ನು ಹೊಂದಿದ್ದೇವೆ ಎಂದು ಗೂಗಲ್ ಹಾಗೂ ಯೂಟ್ಯೂಬ್ ತಿಳಿಸಿವೆ.

Share This Article
Leave a comment