March 31, 2023

Newsnap Kannada

The World at your finger tips!

hospital , death , doctor

Massive fire accident in private hospital: Doctor, two children burnt alive ಖಾಸಗಿ ಆಸ್ಪತ್ರೆಯಲ್ಲಿ ಭಾರೀ ಅಗ್ನಿ ಅವಘಡ: ವೈದ್ಯ, ಇಬ್ಬರು ಮಕ್ಕಳು ಸಜೀವ ದಹನ

ಖಾಸಗಿ ಆಸ್ಪತ್ರೆಯಲ್ಲಿ ಭಾರೀ ಅಗ್ನಿ ಅವಘಡ: ವೈದ್ಯ, ಇಬ್ಬರು ಮಕ್ಕಳು ಸಜೀವ ದಹನ

Spread the love

ಖಾಸಗಿ ಆಸ್ಪತ್ರೆಯೊಂದರಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿ ವೈದ್ಯ ಹಾಗೂ ಇಬ್ಬರು ಮಕ್ಕಳು ಸಜೀವ ದಹನವಾಗಿರುವ ಘಟನೆ ತಿರುಪತಿ ಜಿಲ್ಲೆಯ ರೇಣಿಗುಂಟದಲ್ಲಿ ನಡೆದಿದೆ.

ಡಾ.ರವಿಶಂಕರರೆಡ್ಡಿ (47), ಮಗ ಸಿದ್ಧಾರ್ಥ್ ರೆಡ್ಡಿ (12) ಮಗಳು ಕಾರ್ತಿಕ (6) ಮೃತರು.ಇದನ್ನು ಓದಿ –ಮೈಸೂರು ದಸರಾ ಉತ್ಸವಕ್ಕೆ ಚಾಲನೆ ನೀಡಿ ದೇವಿಗೆ ಪುಪ್ಷಾರ್ಚನೆ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ರೇಣಿಗುಂಟದ ಖಾಸಗಿ ಆಸ್ಪತ್ರೆಯಲ್ಲಿ ಶಾರ್ಟ್​ ಸರ್ಕ್ಯೂಟ್​ನಿಂದ ಬೆಂಕಿ ಅವಘಡ ಸಂಭವಿಸಿದೆ. ಇದರ ಪರಿಣಾಮ ಆಸ್ಪತ್ರೆಯ ಮೇಲಿನ ಮಹಡಿಯಲ್ಲಿ ಮನೆಯಲ್ಲಿಯೂ ಬೆಂಕಿ ಕಾಣಿಸಿಕೊಂಡಿದೆ.

ಕೂಡಲೇ ಡಾ.ರವಿಶಂಕರರೆಡ್ಡಿ ಮನೆಯಲ್ಲಿದ್ದ ಮಕ್ಕಳನ್ನು ರಕ್ಷಿಸಲು ಹೋಗಿ ಮೂವರು ಸಜೀವ ದಹನವಾಗಿದ್ದಾರೆ.


ಇಬ್ಬರು ಮಕ್ಕಳಿಗೆ ಕಾರ್ಬನ್ ಮಾನಾಕ್ಸೈಡ್ ಪರಿಣಾಮದಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಹತ್ತಿದ ಬೆಂಕಿಯನ್ನು ನಂದಿಸಿ, ಡಾ. ರವಿಶಂಕರ್ ರೆಡ್ಡಿ ಅವರ ತಾಯಿ ಮತ್ತು ಪತ್ನಿಯನ್ನು ರಕ್ಷಣೆ ಮಾಡಿದ್ದಾರೆ.

error: Content is protected !!