ಅಕಾಲಿಕ ಮಳೆಗೆ ಬಾರದ ಮಾವಿನ ಫಸಲು: ಬೆಲೆ ಮಾತ್ರ ಈ ಬಾರಿ ಗಗನಕ್ಕೆ

Team Newsnap
1 Min Read

ಮಾವು ಎಂದರೆ ಎಂಥವರ ಬಾಯಲ್ಲೂ ನೀರು ಬರಿಸುತ್ತದೆ. ಆದರೆ ಈ ಬಾರಿ ಮಾವಿನ ರುಚಿ ಸವಿಬೇಕು ಅಂದರೆ ಇನ್ನೂ ಸ್ಪಲ್ಪ ದಿನ ಕಾಯಲೇಬೇಕು. ಜೊತೆಗೆ ಮಾವು ದುಬಾರಿ ಬೆಲೆಯೂ ಗ್ರಾಹಕರ ಜೇಬಿಗೆ ಕತ್ತರಿ ಹಾಕುವಂತೆ ಮಾಡುತ್ತದೆ

ಈ ಬಾರಿ ಮಾವಿನ ಹಣ್ಣಿನ ಫಸಲು ಕಡಮೆ. ಮಾವಿನ ಫಸಲಿನ ಮೇಲೆ ಪ್ರಕೃತಿ ಮುನಿಸಿಕೊಂಡಿದೆ. ನವೆಂಬರ್ ತಿಂಗಳಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಮಾವಿನ ಫಸಲು ಕೈಗೆ ಬರುವುದು ವಿಳಂಬವಾಗಿದೆ.

WhatsApp Image 2022 02 18 at 10.14.11 PM

ಪ್ರತಿ ವರ್ಷ ಮಾರ್ಚ್ ಕೊನೆ ಏಪ್ರಿಲ್ ಮೊದಲವಾರದಲ್ಲಿ ಮಾವು ಮಾರುಕಟ್ಟೆಗೆ ಬರುತ್ತಿತ್ತು. ಆದರೆ ಈ ಬಾರಿ ಏಪ್ರಿಲ್‍ಗೆ ಕೆಲವೇ ದಿನ ಬಾಕಿ ಇದ್ದರೂ ಮಾವು ಮಾರುಕಟ್ಟೆಗೆ ಬಂದಿಲ್ಲ.

ಏಪ್ರಿಲ್ ಅಂತ್ಯಕ್ಕೆ ಮಾವು ಸವಿಯಲು ಸಿಗಬಹುದು.
ಈ ಬಾರಿ ಕೇವಲ ಶೇ.40ರಿಂದ 50ರಷ್ಟು ಇಳುವರಿ ಬರಬಹುದು ಅಂತಾ ಮಾವು ನಿಗಮದ ತಾಂತ್ರಿಕ ಸಮಿತಿ ಅಂದಾಜಿಸಿದೆ.

ಈ ವರ್ಷ ಕರ್ನಾಟಕದಲ್ಲಿ ಕೇವಲ 8 ಲಕ್ಷ ಮೆಟ್ರಿಕ್ ಟನ್ ಮಾವು ಬರುವ ಅಂದಾಜಿದೆ. ಮೇ ತಿಂಗಳಲ್ಲಿ ಹೆಚ್ಚಿನ ಮಾವು ಬರಬಹುದು. ಮಾವಿನ ಇಳುವರಿ ಕಡಿಮೆಯಾಗುವುದರಿಂದ ಬೆಲೆ ಸಹ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.

Share This Article
Leave a comment