ಮಾವು ಎಂದರೆ ಎಂಥವರ ಬಾಯಲ್ಲೂ ನೀರು ಬರಿಸುತ್ತದೆ. ಆದರೆ ಈ ಬಾರಿ ಮಾವಿನ ರುಚಿ ಸವಿಬೇಕು ಅಂದರೆ ಇನ್ನೂ ಸ್ಪಲ್ಪ ದಿನ ಕಾಯಲೇಬೇಕು. ಜೊತೆಗೆ ಮಾವು ದುಬಾರಿ ಬೆಲೆಯೂ ಗ್ರಾಹಕರ ಜೇಬಿಗೆ ಕತ್ತರಿ ಹಾಕುವಂತೆ ಮಾಡುತ್ತದೆ
ಈ ಬಾರಿ ಮಾವಿನ ಹಣ್ಣಿನ ಫಸಲು ಕಡಮೆ. ಮಾವಿನ ಫಸಲಿನ ಮೇಲೆ ಪ್ರಕೃತಿ ಮುನಿಸಿಕೊಂಡಿದೆ. ನವೆಂಬರ್ ತಿಂಗಳಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಮಾವಿನ ಫಸಲು ಕೈಗೆ ಬರುವುದು ವಿಳಂಬವಾಗಿದೆ.
ಪ್ರತಿ ವರ್ಷ ಮಾರ್ಚ್ ಕೊನೆ ಏಪ್ರಿಲ್ ಮೊದಲವಾರದಲ್ಲಿ ಮಾವು ಮಾರುಕಟ್ಟೆಗೆ ಬರುತ್ತಿತ್ತು. ಆದರೆ ಈ ಬಾರಿ ಏಪ್ರಿಲ್‍ಗೆ ಕೆಲವೇ ದಿನ ಬಾಕಿ ಇದ್ದರೂ ಮಾವು ಮಾರುಕಟ್ಟೆಗೆ ಬಂದಿಲ್ಲ.
ಏಪ್ರಿಲ್ ಅಂತ್ಯಕ್ಕೆ ಮಾವು ಸವಿಯಲು ಸಿಗಬಹುದು.
ಈ ಬಾರಿ ಕೇವಲ ಶೇ.40ರಿಂದ 50ರಷ್ಟು ಇಳುವರಿ ಬರಬಹುದು ಅಂತಾ ಮಾವು ನಿಗಮದ ತಾಂತ್ರಿಕ ಸಮಿತಿ ಅಂದಾಜಿಸಿದೆ.
ಈ ವರ್ಷ ಕರ್ನಾಟಕದಲ್ಲಿ ಕೇವಲ 8 ಲಕ್ಷ ಮೆಟ್ರಿಕ್ ಟನ್ ಮಾವು ಬರುವ ಅಂದಾಜಿದೆ. ಮೇ ತಿಂಗಳಲ್ಲಿ ಹೆಚ್ಚಿನ ಮಾವು ಬರಬಹುದು. ಮಾವಿನ ಇಳುವರಿ ಕಡಿಮೆಯಾಗುವುದರಿಂದ ಬೆಲೆ ಸಹ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.
- ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ
- ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
- ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
More Stories
ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ
ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು