ಮಂಗಳೂರು: ಗುಂಡು ಹಾರಿಸಿಕೊಂಡು ಮಹಿಳಾ ಪಿಎಸ್‌ಐ ಆತ್ಮಹತ್ಯೆ ಯತ್ನ

Team Newsnap
1 Min Read

ಎನ್​ಎಂಪಿಎಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಐಎಸ್‌ಎಫ್ ನ ಮಹಿಳಾ ಪಿಎಸ್​ಐ ಭಾರತಿ ಬಾಯಿ ಇಂದು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಈ ಘಟನೆ ಮಂಗಳೂರಿನ ಎನ್​ಎಂಪಿಎ ದ ಪ್ರಮುಖ ದ್ವಾರದ ಗೇಟ್​ ಬಳಿ ನಡೆದಿದೆ.ಇದನ್ನು ಓದಿ -ಮಹಾ ಕುಂಭಮೇಳ ವಿಜೃಂಬಣೆಯಿಂದ ಆಚರಣೆ: ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ

ಇವರ ಪತಿ ಓಂಬೀರ್ ಸಿಂಗ್ ಎಂಆರ್​ಪಿಎಲ್ ನಲ್ಲಿ ಅಸಿಸ್ಟೆಂಟ್ ಕಮಾಂಡೆಂಟ್ ಆಗಿದ್ದಾರೆ. ಇವರು ರಾಜಸ್ಥಾನದ ಭಾರತ್ ಪುರ್ ಜಿಲ್ಲೆಯವರು.

ಪ್ರಾಥಮಿಕ ಮಾಹಿತಿ ಪ್ರಕಾರ, ಕುಟುಂಬದೊಳಗಿನ ವಿವಾದದಿಂದಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾರತಿ ಬಾಯಿ ಅವರು ಬರೆದಿರುವ ಸೂಸೈಡ್ ನೋಟ್ ಪೊಲೀಸರಿಗೆ ಸಿಕ್ಕಿದೆ. ಗಾಯಗೊಂಡಿರುವ ಭಾರತಿ ಅವರನ್ನು ಎಜೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Share This Article
Leave a comment