ಮಹಾ ಕುಂಭಮೇಳ ವಿಜೃಂಬಣೆಯಿಂದ ಆಚರಣೆ: ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ

Team Newsnap
2 Min Read
kumbhamela

ಮಹಾ ಕುಂಭಮೇಳವನ್ನು ವಿಜೃಂಬಣೆಯಿಂದ ಆಚರಣೆ ಮಾಡಿ ದೇಶಕ್ಕೆ ತ್ರಿವೇಣಿ ಸಂಗಮ ಪರಿಚಯಿಸಲಾಗುತ್ತಿದೆ.

ಕುಂಭದ ಶಕ್ತಿಯನ್ನು ವಿಸರ್ಜನೆ ಮಾಡಿ ನಾಡಿಗಾಗಿ,ದೇಶಕ್ಕಾಗಿ, ವಿಶ್ವದ ಸುಖ, ಶಾಂತಿ ಸಮೃದ್ಧಿಯಾಗಲಿ ಎಂಬ ಉದ್ದೇಶದಿಂದ ಮಹಾ ಕುಂಭಮೇಳ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ ಎಂದು ಶ್ರೀರಂಗಪಟ್ಟಣದ ಚಂದ್ರವನಾಶ್ರಮದ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ‌ಯವರು ತಿಳಿಸಿದರು.

ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಮಹಾ ಕುಂಭಮೇಳ ಕುರಿತು ಮಾಹಿತಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು ಒಂದು ನದಿಯ ದರ್ಶನ ಮಾಡಿದರೆ ಪುಣ್ಯ ಎಂದರೆ, ಮೂರು ನದಿಗಳು ಸಂಗಮವಾಗುವ ತ್ರಿವೇಣಿ ಸಂಗಮವನ್ನು ಸ್ಪರ್ಶಿಸಿ ನಮಸ್ಕರಿಸಿದರೆ ಪಾಪ ವಿಮೋಚನೆಯಾಗುತ್ತದೆ ಎಂದರು. ಗ್ರಾ.ಪಂ ಅಧ್ಯಕ್ಷರ ಅಧಿಕಾರ ಮೊಟಕಿಲ್ಲ: ಪ್ರಸ್ತಾವನೆಗೆ ಸಿಎಂ ಬೊಮ್ಮಾಯಿ ತಿರಸ್ಕಾರ

ಸಚಿವ ಕೆ.ಸಿ.ನಾರಾಯಣಗೌಡ ರವರು ಮಾತನಾಡಿಕೆ.ಆರ್ ಪೇಟೆ ತಾಲ್ಲೂಕಿನ ಅಂಬಿಗರಹಳ್ಳಿ- ಪುರ-ಸಂಗಾಪುರ ಗ್ರಾಮಗಳ ಕಾವೇರಿ ನದಿ ತ್ರಿವೇಣಿ ಸಂಗಮದಲ್ಲಿ ಅಕ್ಟೋಬರ್ 13 ರಿಂದ 16 ರವರೆಗೆ ಮಹಾ ಕುಂಭಮೇಳ ನಡೆಯಲಿದೆ ಎಂದರು.

ಮಹಾ ಕುಂಭಮೇಳ ಕಾರ್ಯಕ್ರಮವು ಜಗದ್ಗುರು ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಜಿ , ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹಾಗೂ ಮಠಾಧೀಶರುಗಳ ನೇತೃತ್ವದಲ್ಲಿ ಮತ್ತು ಮುಖ್ಯಮಂತ್ರಿಗಳ ಸಹಕಾರದೊಂದಿಗೆ ನಡೆಯುತ್ತಿದೆ ಎಂದರು.

ದಕ್ಷಿಣ ಕರ್ನಾಟಕದಲ್ಲಿ ಎರಡನೇ ಬಾರಿ ಕುಂಭಮೇಳ ದೊಡ್ಡಮಟ್ಟದಲ್ಲಿ ನಡೆಯುತ್ತಿದೆ. ಈ ಮಹಾ ಕಂಭಮೇಳಕ್ಕೆ 6 ಲಕ್ಷ ಜನರು ಬರುವುದಕ್ಕೆ ಅವಕಾಶವಿದೆ ಎಂದು ಸರ್ವೆ ಮಾಡಲಾಗಿದೆ ಎಂದರು.

ಮಹಾ ಕುಂಭ ಮೇಳಕ್ಕೆ ಬರುವ ಭಕ್ತಾದಿಗಳು ಸ್ನಾನ ಮಾಡಿ ಪೂಜೆಯನ್ನು ಸಲ್ಲಿಸಿ ಹಾಗೂ ಸಾಧುಸಂತರರನ್ನು ದರ್ಶನ ಮಾಡುವ ಅವಕಾಶವಿದೆ ಎಂದರು.

‘ಮಹಾಕಾಳೇಶ್ವರ ಕಾರಿಡಾರ್’ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ

ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ ಮಾತನಾಡಿ ಕೆ.ಆರ್.ಪೇಟೆ ತಾಲ್ಲೂಕಿನ ಅಂಬಿಗರಹಳ್ಳಿಯಲ್ಲಿ ಶ್ರೀ ಮಲೈ ಮಹದೇಶ್ವರರು ಬಂದು ಹೋಗಿರುವ ಸ್ಥಳವಾಗಿದೆ . ಕಾವೇರಿ, ಹೇಮಾವತಿ, ಲಕ್ಷ್ಮಣ ತೀರ್ಥ ಈ ಮೂರು ನದಿಗಳು ಅಂಬಿಗರಹಳ್ಳಿ, ಸಂಗಾಪುರ, ಪುರ ಮೂರು ಹಳ್ಳಿಗಳ ಮಧ್ಯೆ ಸೇರುವ ಪವಿತ್ರ ಸ್ಥಳದಲ್ಲಿ ಶ್ರೀ ಮಲೈ ಮಹದೇಶ್ವರರು ಬಂದು ಪಾದಸ್ಪರ್ಶ ಮಾಡಿ ಹೋಗಿದ್ದಾರೆ ಎಂದರು.

2013 ರಲ್ಲಿ ನಡೆದ ಕುಂಭಮೇಳ ಕಾರ್ಯಕ್ರಮಕ್ಕಿಂತ ಭಿನ್ನವಾಗಿ ಈ ಬಾರಿ ಮಹಾಕುಂಭಮೇಳ ಕಾರ್ಯಕ್ರಮವನ್ನು ಆಚರಣೆ ಮಾಡಲಾಗುತ್ತಿದೆ. ಈ ಭಾಗದಲ್ಲಿ ಕುಂಭ ಮೇಳ ಕಾರ್ಯಕ್ರಮ ನಡೆಯಬೇಕು ಎಂದು ನೇತೃತ್ವವನ್ನು ಪರಮಪೂಜ್ಯ ಸ್ವಾಮೀಜಿಗಳು ವಹಿಸಿಕೊಂಡಿರುತ್ತಾರೆ. ಮಹಾಕುಂಭಮೇಳ ಕಾರ್ಯಕ್ರಮದ ಉದ್ಘಾಟನೆಯನ್ನು ಅ.14 ರಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ನೆರವೇರಿಸಲಿದ್ದಾರೆ ಎಂದು ಹೇಳಿದರು.

ದೇವಸ್ಥಾನದಲ್ಲಿ ನಡೆಯಬೇಕಿರುವ ಪೂಜಾ ಕಾರ್ಯಕ್ರಮವನ್ನು ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ‌ಯವರು ವಹಿಸಿಕೊಂಡಿದ್ದಾರೆ. ಅಕ್ಟೋಬರ್ 06 ರಂದು ಶ್ರೀ ಮಲೈ ಮಹದೇಶ್ವರ ಬೆಟ್ಟದಲ್ಲಿ ಸ್ವಾಮೀಜಿಗಳು ಚಾಮರಾಜನಗರ,ಮೈಸೂರು, ಮಂಡ್ಯ ಸೇರಿದಂತೆ 3 ಮಹದೇಶ್ವರ ಜ್ಯೋತಿ ರಥಗಳಿಗೆ ಚಾಲನೆ ನೀಡಲಾಗಿದೆ. ಜ್ಯೋತಿರಥಗಳು ಪ್ರತಿ ಹಳ್ಳಿಗಳಿಗೆ, ದೇವಸ್ಥಾನಗಳಿಗೆ,ಮಠಗಳಿಗೆ ಭೇಟಿ ಕೊಟ್ಟು ಸುಮಾರು 8ಲಕ್ಷಕ್ಕೂ ಅಧಿಕ ಜನರು ದೇವರ ದರ್ಶನ ಪಡೆದಿದ್ದಾರೆ ಎಂದರು.

ಮಹಾಕುಂಭ ಮೇಳ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಪೂರ್ಣವಾದ ಸಹಕಾರ ನೀಡಿದ್ದಾರೆ. 40ಕ್ಕಿಂತ ಹೆಚ್ಚು ಸಾದು ಸಂತರು ಹೊರ ರಾಜ್ಯ ಹಾಗೂ ನಮ್ಮ ರಾಜ್ಯದಿಂದ ಬರುತ್ತಾರೆ. ಮಂಡ್ಯ ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಂದ ಲಕ್ಷಾಂತರ. ಭಕ್ತರು ಈ ಕುಂಭಮೇಳ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.ಭಕ್ತಾದಿಗಳಿಗೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಎಸ್.ಅಶ್ವತಿ,ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು, ಜಿ.ಪಂ.ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಶಾಂತ ಎಲ್. ಹುಲ್ಮನಿ ಇತರರು ಉಪಸ್ಥಿತರಿದ್ದರು

Share This Article
Leave a comment