January 9, 2025

Newsnap Kannada

The World at your finger tips!

police 1

ಟೀ ಕುಡಿಯೋಕೆ ಹೋಗಿ 10 ಲಕ್ಷ ರು ಹಣ ಕಳೆದುಕೊಂಡ ಮ್ಯಾನೇಜರ್.

Spread the love

ಮಾಲೀಕನ ಮೊಮ್ಮಗಳ ಮದುವೆಗೆಂದು ಬ್ಯಾಂಕ್​​ನಿಂದ ಡ್ರಾ ಮಾಡಿದ್ದ 10 ಲಕ್ಷ ರು ಹಣವನ್ನು ಖದೀಮರು ಕ್ಷಣ ಮಾತ್ರದಲ್ಲಿ ಎಗರಿಸಿಕೊಂಡು ಪರಾರಿಯದ ಘಟನೆ ಬೆಂಗಳೂರಿನ ಚಂದ್ರಾ ಲೇಔಟ್ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸಂಸ್ಥೆಯೊಂದರ ಮ್ಯಾನೇಜರ್ ಆಗಿರುವ ವ್ಯಕ್ತಿ ಮಾಲೀಕರ ಸೂಚನೆಯಂತೆ ಮದುವೆಗಾಗಿ ವಿವಿಧ ಬ್ಯಾಂಕ್​ಗಳಿಂದ 10 ಲಕ್ಷ ರೂಪಾಯಿ ಹಣವನ್ನು ಡ್ರಾ ಮಾಡಿದ್ದರು.

ಹಣ ಡ್ರಾ ಮಾಡಿಕೊಂಡು ಮನೆಗೆ ಹಿಂದಿರುಗುವಾಗ ಕಾರ್ ಟೈರ್ ಪಂಚರ್ ಆದ ಕಾರಣ ಮ್ಯಾನೇಜರ್ ಗಾಡಿ ನಿಲ್ಲಿಸಿದ್ದಾರೆ. ಈ ವೇಳೆ ಹಣವನ್ನು ಕಾರಿನ ಹಿಂಬದಿಯ ಸೀಟ್​ನಲ್ಲಿಟ್ಟು ಪಂಚರ್ ಹಾಕಿಸಿ ಟೀ ಕುಡಿಯಲು ಹೋಗಿದ್ದ ಸಂದರ್ಭದಲ್ಲಿ ಬಂದ ಖತರ್ನಾಕ್ ಕಳ್ಳರು ಕಾರಿನ ಹಿಂಭಾಗದ ಗ್ಲಾಸ್ ಹೊಡೆದು ಹತ್ತು ಲಕ್ಷ ರೂಪಾಯಿ ಹಣವನ್ನು ಲಪಟಾಯಿಸಿದ್ದಾರೆ.

ಹಣ ಕಳೆದುಕೊಂಡು ಕಂಗಾಲಾಗಿರುವ ಮ್ಯಾನೇಜರ್ ಈ ಸಂಬಂಧ ಚಂದ್ರಾ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ.

ಆರೋಪಿಗಳ ಪತ್ತೆಗೆ ಚಂದ್ರಾ ಲೇಔಟ್ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!