ಆವಾಜ್ ಹಾಕಿದ MES ಮುಖಂಡನಿಗೆ ಮಸಿ ಬಳಿದ ಕರ್ನಾಟಕ ಪಡೆ;: ಬೆಳಗಾವಿ ಬಂದ್​

Team Newsnap
1 Min Read

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನಕ್ಕೆ ವಿರುದ್ಧವಾಗಿ ಎಂಇಎಸ್​ ಕಾರ್ಯಕರ್ತರು ಮಹಾಮೇಳವನ್ನು ಆಯೋಜಿಸಿ ಉದ್ಧಟತನ ಮೆರೆದು, ಬೆಳಗಾವಿ ಪಾಲಿಕೆ ಸಿಬ್ಬಂದಿಗೆ ಎಂಇಎಸ್​ನ ಕೆಲವು ಪುಂಡರು ಆವಾಜ್ ಹಾಕಿರುವ ಘಟನೆ ವಿಕೋಪಕ್ಕೆ ತಿರುಗಿದೆ

ಈ ಘಟನೆಯಿಂದ ಕೆರಳಿದ ಕರ್ನಾಟಕ ನವ ನಿರ್ಮಾಣ ಪಡೆಯ ಕಾರ್ಯಕರ್ತರು ಎಂಇಎಸ್​ ಮುಖಂಡರಿಗೆ ಮಸಿ ಬಳಿದಿದ್ದಾರೆ.

ಬೆಳಗಾವಿ ವ್ಯಾಕ್ಸಿನ್ ಡಿಪೋದಲ್ಲಿ ಎಂಇಎಸ್ ಕಾರ್ಯಕರ್ತರು ಹಾಗೂ ಕರ್ನಾಟಕ ನವ ನಿರ್ಮಾಣ ಪಡೆ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ.

ಆಗ ಆಕ್ರೋಶಗೊಂಡ ಕರ್ನಾಟಕ ನವ ನಿರ್ಮಾಣ ಪಡೆಯ ಕಾರ್ಯಕರ್ತರು, ಎಂಇಎಸ್ ಮುಖಂಡ ದೀಪಕ್ ದಳವಿ ಮುಖಕ್ಕೆ ಮಸಿ ಬಳಿದು ಸೇಡು ತೀರಿಸಿಕೊಂಡಿದ್ದಾರೆ.

ಎಂಇಎಸ್​ ಕಾರ್ಯಕರ್ತರು ಅನಧಿಕೃತವಾಗಿ ವೇದಿಕೆ ನಿರ್ಮಾಣ ಮಾಡಿದ್ದರು. ಇದನ್ನು ಪಾಲಿಕೆ ಸಿಬ್ಬಂದಿ ತೆರವು ಮಾಡಲು ಮುಂದೆ ಬಂದಾಗ ಅವಾಜ್ ಹಾಕಿದ್ದಾರೆ ಎನ್ನಲಾಗಿದೆ.

ನಾಳೆ ಬೆಳಗಾವಿ ಬಂದ್ ?

ಸದ್ಯ ಅಲ್ಲಿನ ಪರಿಸ್ಥಿತಿ ಕೊಂಚ ವಿಷಮಗೊಂಡಿದೆ. ಹೀಗಾಗಿ ಪೊಲೀಸ್ ಅಧಿಕಾರಿಗಳು ಕೆಲವರನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಇತ್ತ ಮಸಿ ಬಳಿಯುತ್ತಿದ್ದಂತೆ ಎಂಇಎಸ್​ ಮುಖಂಡರು ನಾಳೆ ಬೆಳಗಾವಿ ಬಂದ್​ಗೆ ಕರೆ ನೀಡಿದ್ದಾರೆ.

​​ಎಂಇಎಸ್ ಮಾಜಿ ಶಾಸಕ ಮನೋಹರ್ ಕಿಣೇಕರ್ ಬಂದ್​ಗೆ ಕರೆ ನೀಡಿದ್ದಾರೆ. ಮಸಿ ಬಳಿದಿರುವ ಘಟನೆಯ ಬಗ್ಗೆ ಮಹಾರಾಷ್ಟ್ರ ನಾಯಕರ ಗಮನಕ್ಕೆ ತರುತ್ತೇನೆ. ಶಿವಸೇನೆ, ಎನ್​ಸಿಪಿ ಹಾಗೂ ಕಾಂಗ್ರೆಸ್ ನಾಯಕರ ಗಮನಕ್ಕೂ ತರುತ್ತೇನೆ. ಅಲ್ಲದೇ ನಾಳಿನ ಬಂದ್​ ಯಶಸ್ವಿಯಾಗುವಂತೆ ಮಾಡುತ್ತೇವೆ ಎಂದು ಹೇಳಿದ್ದಾರೆ.

Share This Article
Leave a comment