ಮಂಡ್ಯದ ಪಶ್ಚಿಮ ಠಾಣೆಯ ಪೋಲಿಸರು ಪ್ರಕರಣ ದಾಖಲಿಸಿಕೊಂಡ ಹಾಕಲಾಗಿರುವ ಎಫ್‌ಐಆರ್ ಗಿಂತಲೂ ಅಸಲಿಗೆ ನಡೆದಿದ್ದೇ ಬೇರೆ .
ಮೈಸೂರಿನ ದರ್ಶನ್ ಲಾಡ್ಜ್ ನಲ್ಲಿ ಬಿಜೆಪಿ ಮುಖಂಡ ಹಾಗೂ ಚಿನ್ನದ ವ್ಯಾಪಾರಿ ಜಗನ್ನಾಥ ಶೆಟ್ಟಿ ಹನಿಟ್ರ್ಯಾಫ್ ಪ್ರಕರಣದಲ್ಲಿ ಸಲ್ಮಾ ಗ್ಯಾಂಗ್ ದರ್ಶನ್ ಲಾಡ್ಜ್ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಜಗನ್ನಾಥ ಶೆಟ್ಟಿ ಕಾಲೇಜು ಉಪನ್ಯಾಸಕ ಎಂಬುದಾಗಿ ಮಾಹಿತಿ ನೀಡಿ, ರೂಂ ಪಡೆದಿದ್ದರು ಎಂದು ತಿಳಿದು ಬಂದಿದೆ.
ಇದನ್ನು ಓದಿ – ಬಿಜೆಪಿ ‘ಜನೋತ್ಸವದ ಬದಲು ‘ಜನಸ್ಪಂದನ’ ಕಾರ್ಯಕ್ರಮ: ಸೆ.10ಕ್ಕೆ ದೊಡ್ಡಬಳ್ಳಾಪುರದಲ್ಲಿ
ಮೈಸೂರಿನ ದರ್ಶನ ಲಾಡ್ಜ್ ಲ್ಲಿ ಯುವತಿಯೊಂದಿಗೆ ಜಗನ್ನಾಥ ಶೆಟ್ಟಿ ಇರುವ ಮಾಹಿತಿ ತಿಳಿದ ಸಲ್ಮಾ ಗ್ಯಾಂಗ್, ದಿಢೀರ್ ಅವರ ರೂಂ ಗೆ ದಾಳಿ ನಡೆಸಿತ್ತು.
ದಾಳಿಯ ವೇಳೆಯಲ್ಲಿ ವೀಡಿಯೋ ಕೂಡ ಚಿತ್ರೀಕರಣ ಮಾಡಿಕೊಂಡಿತ್ತು. ಜೊತೆಗೆ ಬಿಜೆಪಿ ಮುಖಂಡ ಜಗನ್ನಾಥ ಶೆಟ್ಟಿಯವರನ್ನು ಮನಬಂಧಂತೆ ಥಳಿಸಿರೋ ವೀಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಈ ಪ್ರಕರಣದಲ್ಲಿ ಮಂಡ್ಯ ಪಶ್ಚಿಮ ವಿಭಾಗದ ಠಾಣೆಯ ಪೊಲೀಸರು ಕೇಸ್ ದಾಖಲಿಸಿಕೊಂಡು, ಸಲ್ಮಾ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ.
ಈಗ ಶೆಟ್ಟಿ ಪ್ಲಾನ್ ಮಾಡಿ ಯುವತಿಯನ್ನು ಲಾಡ್ಜ್ ಗೆ ಕರೆದುಕೊಂಡು ಹೋಗಿರುವ ಬಗ್ಗೆ ಬಯಲಾಗಿರುವ ಆಡಿಯೋ ಮತ್ತು ವಿಡಿಯೋ ಬಯಲಾಗಿದೆ. ಈ ಕುರಿತಂತೆ ಸತ್ಯಾಸತ್ಯತೆ ಗೊತ್ತಾಗಬೇಕಾಗಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು