ಮಂಡ್ಯದ ಕೆ ಆರ್ ಎಸ್ ಡ್ಯಾಂ 1 ವರ್ಷದೊಳಗೆ 3 ಬಾರಿ ಭರ್ತಿ – ರೈತರಿಗೆ ಹರ್ಷ

Team Newsnap
1 Min Read

ಜಿಲ್ಲೆಯ ಜೀವನಾಡಿಯಾಗಿರುವ ಶ್ರೀರಂಗಪಟ್ಟಣ ( Srirangapatna ) ತಾಲೂಕಿನ ಕೆಆರ್‌ಎಸ್ ( KRS ) ಜಲಾಶಯ 3 ಬಾರಿ ಭರ್ತಿಯಾಗುವ ಮೂಲಕ ದಾಖಲೆ ಬರೆದಿದೆ.

ಕಾವೇರಿ ಜಲಾನಯನ ( Kaveri River )ಪ್ರದೇಶದಲ್ಲಿ ಉತ್ತಮವಾಗಿ ಮಳೆಯಾಗುತ್ತಿದೆ. ಈ ಕಾರಣ ಕೆಆರ್‌ಎಸ್ ಡ್ಯಾಂಗೆ ಒಳಹರಿವಿನ ಪ್ರಮಾಣ ಕಳೆದ 4-5 ದಿನಗಳಿಂದ ಹೆಚ್ಚಳವಾಗಿದೆ.ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಬೆಂಕಿ ದುರಂತ : ಸುಟ್ಟು ಬೂದಿಯಾದ ಫೈಲ್‌ಗಳು

ಕೆಆರ್‌ಎಸ್ ಜಲಾಶಯ ಈ ವರ್ಷ 3ನೇ ಬಾರಿಗೆ ಭರ್ತಿಯಾಗಿದೆ. ಈ ವರ್ಷ ಜುಲೈ, ಸೆಪ್ಟೆಂಬರ್ ಹಾಗೂ ಇದೀಗ ಅಕ್ಟೋಬರ್ ತಿಂಗಳಿನಲ್ಲಿ ಕೆಆರ್‌ಎಸ್ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದೆ. ಡ್ಯಾಂ ಸಂಪೂರ್ಣವಾಗಿ ಭರ್ತಿಯಾಗಿರುವುದು ಹಳೆ ಮೈಸೂರು ಭಾಗದ ಜನರಲ್ಲಿ ಹಾಗೂ ಮಂಡ್ಯದ ರೈತರಲ್ಲಿ ಮಂದಹಾಸ ಮೂಡಿಸಿದೆ.

124.80 ಗರಿಷ್ಠ ಅಡಿಯ ಕೆಆರ್‌ಎಸ್ ಡ್ಯಾಂ ( KRS Dam ) ಅಷ್ಟೇ ಅಡಿಗಳಷ್ಟು ತುಂಬಿ ಭರ್ತಿಯಾಗಿದೆ. ಒಳಹರಿವಿನ ಪ್ರಮಾ 36,733 ಕ್ಯೂಸೆಕ್ ಇದ್ದು, ಹೊರ ಹರಿವಿನ ಪ್ರಮಾಣ 33,633 ಕ್ಯೂಸೆಕ್ ಇದೆ. ಕೆಆರ್‌ಎಸ್ ಡ್ಯಾಂ 49.452 ಟಿಎಂಸಿ ಗರಿಷ್ಠ ಸಂಗ್ರಹದ ಸಾಮರ್ಥ್ಯವಿದೆ ಸಂಪೂರ್ಣವಾಗಿ 49.452 ಟಿಎಂಸಿ ನೀರು ಭರ್ತಿಯಾಗಿದೆ.

Share This Article
Leave a comment