February 21, 2026

Newsnap Kannada

The World at your finger tips!

mandya sp

ಹರಾಜಿಗೆ ಬಂದಿರುವ ಮಂಡ್ಯ SP ಹುದ್ದೆ – ಸಾಮಾಜಿಕ ಜಾಲತಾಣದಲ್ಲಿ ಲೇವಡಿ

Spread the love

ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆ ಹರಾಜಿಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ಸಾವ೯ಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಸ್‍ಪಿ ಅವರನ್ನು ವರ್ಗಾವಣೆ ಮಾಡಿ ಒಂದು ವಾರ ಕಳೆದರೂ ಬೇರೆ ಎಸ್‍ಪಿ ನೇಮಕ ಮಾಡದೆ ಹುದ್ದೆ ಖಾಲಿ ಉಳಿದಿದೆ.

ಮಂಡ್ಯ ಎಸ್‍ಪಿ ಹುದ್ದೆ ಹರಾಜಿಗಿದೆ. ಹೆಚ್ಚು ಬಿಡ್ ಕೂಗಿದವರಿಗೆ ಸರ್ಕಾರ ಆದೇಶ ಬರಲಿದೆ. ಭ್ರಷ್ಟ ಕೆಎಸ್‍ಪಿಎಸ್ ಹಾಗೂ ಐಪಿಎಸ್ ಅಧಿಕಾರಿಗಳಿಗೆ ಸುವರ್ಣಾವಕಾಶ ಎಂಬ ಪೋಸ್ಟ್ ಹರಿದಾಡುತ್ತಿದೆ.

ಕಳೆದ ಅ.20 ರಂದು ಎಸ್‍ಪಿಯಾಗಿದ್ದ ಡಾ.ಎಂ.ಅಶ್ವಿನಿ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಅವರ ಜಾಗಕ್ಕೆ ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿದ್ದ ಸುಮನ್ ಡಿ.ಪನ್ನೇಕರ್ ಅವರನ್ನು ನೇಮಿಸಿತ್ತು.

ಆದರೆ ಅಧಿಕಾರ ಪಡೆಯುವ ಮುನ್ನವೇ ಗೃಹ ಇಲಾಖೆ ತಡೆ ನೀಡಿತ್ತು. ಆದರೆ ಅಶ್ವಿನಿ ಅ.21ರಂದೇ ಎಎಸ್‍ಪಿ ವಿ.ಧನಂಜಯ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದರು.

error: Content is protected !!