ಅಮೆರಿಕಾದ ವಸ್ತುಸಂಗ್ರಹಾಲಯಕ್ಕೆ ಟ್ರಸ್ಟಿಯಾಗಿ ಇಶಾ ಅಂಬಾನಿ ನೇಮಕ

Team Newsnap
1 Min Read

ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಪುತ್ರಿ, ರಿಲಯನ್ಸ್ ಜಿಯೋ ನಿರ್ದೇಶಕಿ ಇಶಾ ಅಂಬಾನಿ ಅವರು ಪ್ರತಿಷ್ಠಿತ
ಸ್ಮಿತ್ಸೋನಿಯನ್ ನ್ಯಾಷನಲ್ ಮ್ಯೂಸಿಯಂ ಆಫ್ ಏಷ್ಯನ್ ಆರ್ಟ್ ಮಂಡಳಿಗೆ ಟ್ರಸ್ಟಿಯಾಗಿ ನೇಮಕವಾಗಿದ್ದಾರೆ.

ಸ್ಮಿತ್ಸೋನಿಯನ್ ನ್ಯಾಷನಲ್ಮ್ಯೂಸಿಯಂ ಆಫ್ ಏಷ್ಯನ್ ಆರ್ಟ್ ಮಂಡಳಿಯು ಅಮೆರಿಕ ಮೂಲದ ವಿಶ್ವದ ಅತಿದೊಡ್ಡ ವಸ್ತುಸಂಗ್ರಹಾಲಯ, ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಪ್ರಮುಖ ಭಾಗವಾಗಿದೆ.

ಅಮೆರಿಕದ ಮುಖ್ಯ ನ್ಯಾಯಮೂರ್ತಿ ಜಾನ್ ಜಿ ರಾಬರ್ಟ್ಸ್, ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ನೇತೃತ್ವದ ಆಡಳಿತ ಮಂಡಳಿಯು ಸೆಪ್ಟೆಂಬರ್ 23 ರಂದು ಇಶಾ ಅಂಬಾನಿ ಅವರ ನೇಮಕಾತಿಗೆ ಅನುಮೋದನೆ ನೀಡಿದೆ.

ನಾಲ್ಕು ವರ್ಷಗಳವರೆಗೆ ಇಶಾ ಅಂಬಾನಿ ಅವರು ಟ್ರಸ್ಟಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಇದೇ ವೇಳೆ ಡಾ. ವಿಜಯ್ ಆನಂದ್ ಅವರನ್ನು ಮಂಡಳಿಯ ಉಪಾಧ್ಯಕ್ಷರನ್ನಾಗಿ, ರಾಯಭಾರಿ ಪಮೇಲಾ ಎಚ್. ಸ್ಮಿತ್ ಅವರನ್ನು ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

Share This Article
Leave a comment