ನಾಗಮಂಗಲ ( Nagmangala ) ತಾಲ್ಲೂಕು ಚೀಣ್ಯ ಗ್ರಾಮದ ಬಳಿ ಹಾಕಲಾಗಿದ್ದ ಫ್ಲೆಕ್ಸ್‌ನಲ್ಲಿ ಬೆಂಗಳೂರು ಶಾಂತಿನಗರ ಶಾಸಕ ಹ್ಯಾರಿಸ್ ಕಡೆಯವರು ಹಾಕಿಸಿದ್ದ ಫ್ಲೆಕ್ಸ್‌ನಲ್ಲಿ ಸಾವರ್ಕರ್ ಭಾವಚಿತ್ರ ಇತ್ತು. ಒಂದು ಕಡೆ ಸಿದ್ದರಾಮಯ್ಯ, ಇನ್ನೊಂದು ಕಡೆ ಡಿ.ಕೆ.ಶಿವಕುಮಾರ್ ಸಣ್ಣ ಭಾವಚಿತ್ರಗಳಿದ್ದವು.ಇದನ್ನು ಓದಿ –ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣ : 800 ಪುಟಗಳ ದೋಷಾರೋಪಣೆ ಸಲ್ಲಿಕೆ
ಈ ನಡುವೆ ದೊಡ್ಡದಾಗಿ ವಿ.ಡಿ.ಸಾರ್ವರ್ಕರ್ ( V D Savarkar ) ಭಾವಚಿತ್ರ ಇತ್ತು. ಜೊತೆಗೆ ರಾಹುಲ್ ಗಾಂಧಿ ( Rahul Gandhi ) ನಿಂತಿರುವ ಚಿತ್ರವಿತ್ತು. ಕಾಂಗ್ರೆಸ್ ( Congress ) ಕಾರ್ಯಕರ್ತರಿಗೆ ತಪ್ಪಿನ ಅರಿವಾಗಿ ಫ್ಲೆಕ್ಸ್ ತೆರವುಗೊಳಿಸುವ ವೇಳೆಗಾಗಲೇ ಆ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.
‘ಕೆಲ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳ ಫ್ಲೆಕ್ಸ್ ( Flex ) ಮಾಡಿಸಲಾಗಿದೆ. ಗೂಗಲ್ ಹುಡುಕಾಟದಲ್ಲಿ ಸಿಕ್ಕವರ ಚಿತ್ರಗಳನ್ನು ಬಳಸಲಾಗಿದೆ. ಫ್ಲೆಕ್ಸ್ ಮಾಡಿಸಿದವರಿಗೆ ತಿಳಿಯದೇ ಸಾವರ್ಕರ್ ಚಿತ್ರವನ್ನೂ ಫ್ಲೆಕ್ಸ್ ಮಾಡಿಸಿದ್ದಾರೆ. ಈಗ ಅದನ್ನು ತೆಗೆಯಲಾಗಿದೆ’ ಎಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದರು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು