ಒಂದು ತಿಂಗಳೊಳಗೆ ಮಂಡ್ಯದ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ : ಉಪಲೋಕಾಯುಕ್ತ ನ್ಯಾ.ಫಣೀಂದ್ರ

Team Newsnap
1 Min Read
Mandya Public problems will be solved within a month

ಮಂಡ್ಯ ಜಿಲ್ಲೆಯಲ್ಲಿ ಸಾರ್ವಜನಿಕರಿಂದ ಪಡೆದಂತಹ 75 ಕುಂದುಕೊರತೆ ಅರ್ಜಿಗಳನ್ನು ಈಗಾಗಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಅರ್ಜಿಗಳನ್ನು ರವಾನೆ ಮಾಡಲಾಗಿದೆ. ಸಾರ್ವಜನಿಕರು ನೀಡಿದಂತಹ ಅರ್ಜಿಗಳ ಕುರಿತು ಚರ್ಚಿಸಿ ಅವರಿಗೆ ಒಂದು ತಿಂಗಳೊಳಗೆ ಶೀಘ್ರದಲ್ಲಿ ಪರಿಹಾರ ನೀಡಲು ಪ್ರಯತ್ನಿಸುತ್ತೇವೆ ಎಂದು ಕರ್ನಾಟಕ ಉಪಲೋಕಾಯುಕ್ತ ನ್ಯಾ ಕೆ ಎನ್ ಫಣೀಂದ್ರ ತಿಳಿಸಿದರು.

ಇದನ್ನು ಓದಿ –ಉಪಕಾರ ಮಾಡಿದ್ದೇ ಬೇರೆಯವರು : ಬಿಲ್ಡಪ್ ತೆಗೆದುಕೊಂಡಿದ್ದೇ ಸಂಸದೆ ಸುಮಲತಾ : ಜನಾಕ್ರೋಷ ?

ಮಂಡ್ಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ನ್ಯಾ ಫಣೀಂದ್ರ ,ಅಧಿಕಾರಿಗಳು ಈ ಅರ್ಜಿಗಳಿಗೆ ಸಂಬಂಧಪಟ್ಟ ದೂರುದಾರರಿಗೆ ಪರಿಹಾರ ನೀಡಿ ಲೋಕಾಯುಕ್ತ ಸಂಸ್ಥೆಗೆ ಒಂದು ತಿಂಗಳೊಳಗೆ ವರದಿಯನ್ನು ಸಲ್ಲಿಸಬೇಕು ಪರಿಹಾರ ನೀಡಿದಂತಹ ಪ್ರಕರಣಗಳನ್ನು ಅಲ್ಲಿಯೇ ಮುಕ್ತಾಯ ಗೊಳಿಸುತ್ತೇವೆ ಎಂದರು.

ಲೋಕಾಯುಕ್ತ ಕಚೇರಿಗೆ ದಾಖಲಾಗಿದ್ದ 84 ಪ್ರಕರಣಗಳು ವಿಚಾರಣೆಯನ್ನು ಸೋಮವಾರ ನಡೆಸಲಾಯಿತು.ಒಂದೊಂದು ಪ್ರಕರಣಗಳನ್ನು ಪ್ರತ್ಯೇಕವಾಗಿ ವಿಚಾರಣೆ ಮಾಡಿ ಸುಮಾರು 35 ಪ್ರಕರಣಗಳನ್ನು ಪರಿಹಾರಕ್ಕೆ ತೀರ್ಮಾನವಾಗಿದೆ ಎಂದರು.

ನೋಟಿಸ್ ಜಾರಿ ಮಾಡಿದಂತಹ ಅಧಿಕಾರಿಗಳು ಕೆಲವು ಪ್ರಕರಣಗಳನ್ನು ದೂರುದಾರರಿಗೆ ಪರಿಹಾರವನ್ನು ಸಹ ನೀಡಿದ್ದಾರೆ.ಇದು ಒಂದು ಹೊಸ ಆಯಾಮವನ್ನು ಸೃಷ್ಟಿ ಮಾಡಿದೆ ಎಂದರೆ ತಪ್ಪಾಗಲಾರದು.

ಕಳೆದ ಎರಡು ದಿನಗಳ ಕಾಲ ಮಂಡ್ಯ ಜಿಲ್ಲೆಯಲ್ಲಿ ನಡೆದ ಪ್ರಕ್ರಿಯೆ ಹಾಗೂ ಜನರಿಗೆ ಲೋಕಾಯುಕ್ತರ ಮೇಲೆ ಇಟ್ಟಿರುವ ವಿಶ್ವಾಸ ಬಹಳ ಸಂತೋಷದ ಸಂಗತಿಯಾಗಿದೆ. ಪ್ರವಾಸದ ವೇಳೆ ಕೆಲವು ಗ್ರಾಮ ಪಂಚಾಯಿತಿಗಳಿಗೂ ಸಹ ಭೇಟಿ ನೀಡಿ ಪರಿಶೀಲನೆ ಮಾಡಲಾಯಿತು. ಗ್ರಾಮ ಪಂಚಾಯಿತಿಗಳನ್ನು ಬಹಳ ಉತ್ಕೃಷ್ಟ ಮಟ್ಟದಲ್ಲಿ ಅಭಿವೃದ್ಧಿಪಡಿಸಿದ್ದಾರೆ.

Share This Article
Leave a comment