ಬಳ್ಳಾರಿ GST ಕಛೇರಿಯ ಅಧೀಕ್ಷಕ ಮಧುಸೂಧನ್ ACB ಬಲೆಗೆ

Team Newsnap
1 Min Read

ಬಳ್ಳಾರಿಯ ಕೇಂದ್ರ ತೆರಿಗೆ(ಜಿಎಸ್‌ಟಿ ವಿಭಾಗ) ಕಚೇರಿಯ ಅಧೀಕ್ಷಕ ಮಧುಸೂಧನ್ ಅವರು ಜಿಎಸ್‌ಟಿ ದಂಡದ ಹಣ ರದ್ದುಮಾಡಿ ಪ್ರಕರಣ ಮುಕ್ತಾಯ ಮಾಡಲು 80 ಸಾವಿರ ರೂ.ಗಳು ಲಂಚದ ರೂಪದಲ್ಲಿ ಸ್ವೀಕರಿಸುತ್ತಿದ್ದಾಗ ಬೆಂಗಳೂರು ಮತ್ತು ಬಳ್ಳಾರಿ ಎಸಿಬಿ ತಂಡಗಳು ಟ್ರ್ಯಾಪ್ ಕಾರ್ಯಾಚರಣೆ ನಡೆಸಿವೆ.

ಇದನ್ನು ಓದಿ –ಉಪಕಾರ ಮಾಡಿದ್ದೇ ಬೇರೆಯವರು : ಬಿಲ್ಡಪ್ ತೆಗೆದುಕೊಂಡಿದ್ದೇ ಸಂಸದೆ ಸುಮಲತಾ : ಜನಾಕ್ರೋಷ ?

ಸಿಬಿಐ(ACB) ಬೆಂಗಳೂರಿನ ವಿಶೇಷ ತಂಡವು ಮತ್ತು ಬಳ್ಳಾರಿಯ ಭ್ರಷ್ಟಾಚಾರ ನಿಗ್ರಹದಳ ತಂಡಗಳು ಸೋಮವಾರ ಯಶಸ್ವಿ ಕಾರ್ಯಾಚರಣೆ ನಡೆಸಿ ಕೇಂದ್ರ ತೆರಿಗೆ(GST)ವಿಭಾಗ ಕಚೇರಿಯ ಅಧೀಕ್ಷಕ ಮಧುಸೂಧನ್ ಅವರನ್ನು ಬಲೆಗೆ ಬಿಳಿಸಿವೆ.

ಬಳ್ಳಾರಿ ನಗರದ ನಿವಾಸಿಯಾದ ಈಶ್ವರಯ್ಯ ತಂದೆ ಜಿ.ನರಸಿಂಹಯ್ಯ ಅವರು ವಿವಿಧ ಇಲಾಖೆಗಲಿಗೆ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಮಿಕರನ್ನು ಒದಗಿಸುವ ಗುತ್ತಿಗೆದಾರರಾಗಿದ್ದರು. ಇವರ ಜಿಎಸ್‌ಟಿ ದಂಡದ ಹಣ ರದ್ದು ಮಾಡಿ ಪ್ರಕರಣ ಮುಕ್ತಾಯ ಮಾಡಲು ಈಶ್ವರಯ್ಯ ಅವರಿಗೆ ಕೇಂದ್ರ ತೆರಿಗೆ(GST )ವಿಭಾಗ ಕಚೇರಿಯ ಅಧೀಕ್ಷಕ ಮಧುಸೂಧನ್ ಅವರು 80 ಸಾವಿರ ರೂ.ಗಳ ಬೇಡಿಕೆ ಇಟ್ಟಿದ್ದು,ಈ ಸಂಬಂಧ ಸಿಬಿಐ(ಎಸಿಬಿ) ಬೆಂಗಳೂರು ಅವರಲ್ಲಿ ಪ್ರಕರಣ ದಾಖಲಾಗಿತ್ತು.

ಈ ಕಾರ್ಯಾಚರಣೆಯು ಬಳ್ಳಾರಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಯ ಸಹಯೋಗ ಮತ್ತು ಸಹಕಾರದೊಂದಿಗೆ ಯಶಸ್ವಿಯಾಗಿದೆ ಎಂದು ಬಳ್ಳಾರಿ ACB ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Leave a comment